alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪಿತಪ್ಪಿಯೂ ಈಕೆಯನ್ನು ಮುಟ್ಟೀರಾ ಜೋಕೆ…!

ಸರಗಳ್ಳರು ಸಾಮಾನ್ಯವಾಗಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಾರೆ. ಆದರೆ ಖದೀಮರು ಇನ್ನು ಮುಂದೆ ಈ ಕುರಿತು ಸ್ವಲ್ಪ ಯೋಚಿಸಬೇಕಾಗುತ್ತದೆ. ವೈರಲ್ ಆಗಿರುವ ವಿಡಿಯೋ ಒಂದು ಮಹಿಳೆಯೊಬ್ಬಳು ಬೈಕ್ ನಲ್ಲಿ ಬಂದ ಕಳ್ಳರಿಗೆ ಹೇಗೆ ಬುದ್ದಿ ಕಲಿಸಿದ್ದಾಳೆಂಬುದನ್ನು ತೋರಿಸುತ್ತಿದೆ.

ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬಳಿಂದ ಬೈಕ್ ನಲ್ಲಿ ಬಂದ ಕಳ್ಳರು ಪರ್ಸ್ ಎಗರಿಸಿದ್ದಾರೆ. ಅವರು ಪರಾರಿಯಾಗಲು ಮುಂದಾದ ವೇಳೆ ಮಹಿಳೆ ಅವರ ಬೆನ್ನಟ್ಟಿದ್ದಾಳೆ.

ಹಿಂಬದಿ ಕುಳಿತಿದ್ದವನನ್ನು ಹಿಡಿದೆಳೆದಾಗ ಬೈಕ್ ನಿಂದ ಅವರುಗಳು ಬಿದ್ದಿದ್ದಾರೆ. ಒಬ್ಬ ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಸಿಕ್ಕಿ ಬಿದ್ದ ಮತ್ತೊಬ್ಬನಿಗೆ ಮಹಿಳೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾಳೆ. ಕೊನೆಗೆ ಸ್ಥಳಕ್ಕೆ ಬಂದವನೊಬ್ಬ ಮಹಿಳೆಯಿಂದ ಆತನನ್ನು ಪಾರು ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮಹಿಳೆ ತೋರಿದ ಸಾಹಸಕ್ಕೆ ಎಲ್ಲರೂ ಶಹಬ್ಬಾಶ್ ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...