alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ! ಮೀಸೆ ಕಾರಣಕ್ಕೆ ಹೋಯ್ತು ಕೆಲಸ

ಪಾಕಿಸ್ತಾನದಲ್ಲೊಂದು ವಿಲಕ್ಷಣ ಪ್ರಕರಣ ನಡೆದಿದೆ. ಆಕರ್ಷಕವಾಗಿ ಮೀಸೆ ಬಿಟ್ಟ ಕಾರಣಕ್ಕೆ ಶಾಲಾ ಶಿಕ್ಷಕನೊಬ್ಬ ತನ್ನ ಕೆಲಸ ಕಳೆದುಕೊಂಡಿದ್ದಾನೆ. ಈ ವಿಚಾರವನ್ನು ಈಗ ಸ್ವತಃ ಕೆಲಸ ಕಳೆದುಕೊಂಡ ಶಿಕ್ಷಕನೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ಶಿಕ್ಷಕ ಹಸೀಬ್ ಆಲಿ ಚಿಸ್ತಿ ನೋಡಲು ಸುಂದರವಾಗಿದ್ದನಲ್ಲದೇ ಆಕರ್ಷಕವಾಗಿ ಮೀಸೆ ಬಿಟ್ಟಿದ್ದ. ಈ ಕಾರಣಕ್ಕಾಗಿ ಶಾಲಾ ಆಡಳಿತ ಮಂಡಳಿ ಆತನನ್ನು ಸೇವೆಯಿಂದ ವಜಾಗೊಳಿಸಿದೆ. ಹಸೀಬ್ ಆಲಿ ಚಿಸ್ತಿ ತನ್ನ ವಜಾಕ್ಕೆ ಕಾರಣ ಕೇಳಿದ ವೇಳೆ ಶಾಲಾ ವಿದ್ಯಾರ್ಥಿಗಳು ನಿಮ್ಮ ಮೀಸೆಯ ಕಾರಣಕ್ಕೆ ಸ್ವತಂತ್ರ ಚಿಂತನೆ ಬೆಳೆಸಿಕೊಳ್ಳಬಹುದು ಹಾಗೂ ವಿದ್ಯಾರ್ಥಿನಿಯರು ನಿಮ್ಮೆಡೆಗೆ ಆಕರ್ಷಿತರಾಗಬಹುದು ಎಂಬ ಹಾಸ್ಯಾಸ್ಪದ ಉತ್ತರ ನೀಡಿದ್ದಾರೆ.

ಹಸೀಬ್ ಆಲಿ ಚಿಸ್ತಿ ಈಗ ಈ ವಿಚಾರವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾತನಾಡಿದರೆ ದಂಡ ವಿಧಿಸುತ್ತಿತ್ತು. ನಾಟಕ ಹಾಗೂ ನೃತ್ಯವನ್ನು ನಿಷೇಧಿಸಿತ್ತು. ಈಗ ನಾನು ಯುವಕ ಹಾಗೂ ಸುಂದರವಾಗಿದ್ದೇನೆಂಬ ಕಾರಣವೇಳಿ ವಜಾಗೊಳಿಸಿದೆ ಎಂದು ಆರೋಪಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...