alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಪತ್ರಿಕೆಯಲ್ಲೂ ಪ್ರಕಟವಾಗಿತ್ತು ನಿಧನ ವಾರ್ತೆ

pak-jay

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ನಿಧನರಾಗಿದ್ದಾರೆ ಎಂದು ಪಾಕಿಸ್ತಾನ 2 ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಇದನ್ನು ಹಿರಿಯ ಪತ್ರಕರ್ತರೊಬ್ಬರು ಪ್ರಸ್ತಾಪಿಸಿ ಸ್ಪಷ್ಟನೆ ನೀಡಿದ್ದರು.

ಪಾಕಿಸ್ತಾನದ ಪ್ರಮುಖ ಪತ್ರಕರ್ತರಾಗಿರುವ ಓಮರ್ ಆರ್. ಖುರೇಷಿ, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ, ಪಾಕಿಸ್ತಾನದ 2 ಪ್ರಮುಖ ಪತ್ರಿಕೆಗಳು ಭಾರತದ ರಾಜಕಾರಣಿ ಜಯಲಲಿತಾ ಅವರ ಸಾವಿನ ಸುದ್ದಿ ಪ್ರಕಟಿಸಿವೆ. ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಮತ್ತೊಂದು ಟ್ವೀಟ್ ನಲ್ಲಿ ಪತ್ರಿಕೆಗಳ ಹೆಸರನ್ನು ಪ್ರಸ್ತಾಪಿಸಿ, ಆತ್ಮೀಯರೇ ಜಯಲಲಿತಾ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದರು.

ಪಾಕ್ ಪತ್ರಿಕೆಗಳಿರಲಿ, ಜಯಲಲಿತಾ ಒಡೆತನದ ಜಯಾ ಪ್ಲಸ್ ಸುದ್ದಿವಾಹಿನಿಯಲ್ಲಿಯೇ ನಿಧನದ ಸುದ್ದಿ ಭಿತ್ತರವಾಗಿದೆ. ಇದನ್ನು ಗಮನಿಸಿ ಬೇರೆ ವಾಹಿನಿಗಳು ಸುದ್ದಿ ಪ್ರಸಾರ ಮಾಡಿದ್ದು, ಬಳಿಕ ಅಪೊಲೊ ಆಸ್ಪತ್ರೆಯಿಂದ ಜಯಲಲಿತಾರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು. ಅಂತಿಮವಾಗಿ ಸೋಮವಾರ ರಾತ್ರಿ 11-30 ರ ಸುಮಾರಿಗೆ ಜಯಲಲಿತಾ ನಿಧನರಾದ ಸುದ್ದಿಯನ್ನು ಅಪೊಲೋ ಆಸ್ಪತ್ರೆ ವತಿಯಿಂದ ಪ್ರಕಟಿಸಲಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...