alex Certify
ಕನ್ನಡ ದುನಿಯಾ       Mobile App
       

Kannada Duniya

ಲುಡೋ ಗೊಂಬೆಗಳಾದ ಜನರು: ವಿಡಿಯೋ ವೈರಲ್

ಕೈನಲ್ಲಿ ಮೊಬೈಲ್ ಇದ್ರೆ ಜಗತ್ತು ಮರೆಯುತ್ತೆ. ಚಾಟ್, ಮಾತುಕತೆ, ವಿಡಿಯೋ ಕಾಲಿಂಗ್ ಜೊತೆಗೆ ಬಹುತೇಕರು ಮೊಬೈಲ್ ನಲ್ಲಿ ದಿನಪೂರ್ತಿ ಮಾಡುವ ಕೆಲಸ ಗೇಮ್. ಈಗಾಗ್ಲೇ ಆತ್ಮಹತ್ಯಾ ಗೇಮ್ ಬ್ಲೂ ವೇಲ್ ಜನರ ಪ್ರಾಣ ತೆಗೆಯುತ್ತಿದೆ. ಈ ಮಧ್ಯೆ ಪಾಕಿಸ್ತಾನದ ವಿಡಿಯೋವೊಂದು ಎಲ್ಲರನ್ನು ಆಕರ್ಷಿಸಿದೆ.

90 ರ ದಶಕದ ಲುಡೋ ಗೇಮ್ ಮೊಬೈಲ್ ನಲ್ಲಿ ಪ್ರಸಿದ್ಧಿ ಪಡೆದಿದೆ. ಆದ್ರೀಗ ಈ ಆಟ ಮೊಬೈಲ್ ನಿಂದ ಹೊರಗೆ ಬಂದಿದೆ. ಅಂದ್ರೆ ಮನೆಯಲ್ಲಿ ಲುಡೋ ಪಟ ಹಿಡಿದು ಆಟವಾಡ್ತಿಲ್ಲ. ಬದಲಾಗಿ ಇವರೇ ಮೈದಾನಕ್ಕಿಳಿದಿದ್ದಾರೆ.

ಮರು ಭೂಮಿಯಲ್ಲಿ ಕೆಲವರು ಲುಡೋ ಬೋರ್ಡ್ ಬಿಡಿಸಿದ್ದಾರೆ. ನಂತ್ರ ಅದ್ರ ಮೇಲೆ ನಿಂತಿದ್ದಾರೆ. ದಾಳ ಉರುಳಿದ ನಂತ್ರ ಆ ಸಂಖ್ಯೆಗನುಗುಣವಾಗಿ ಮುಂದಿನ ಮನೆಗೆ ಚಲಿಸುತ್ತಾರೆ. ಗುರಿ ಮುಟ್ಟಿದಾತ ಮಧ್ಯದಲ್ಲಿ ಕುಳಿತುಕೊಂಡಿದ್ದಾನೆ. 20 ಸೆಕೆಂಡ್ ನ ಈ ವಿಡಿಯೋ ವೈರಲ್ ಆಗಿದೆ. ಜನರು ಈ ವಿಡಿಯೋವನ್ನು ಇಷ್ಟಪಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...