alex Certify
ಕನ್ನಡ ದುನಿಯಾ       Mobile App
       

Kannada Duniya

ಲವ್ ಬ್ರೇಕಪ್ ಆಗಿದ್ದಕ್ಕೆ ಕುಣಿದು ಕುಪ್ಪಳಿಸಿದ ಭೂಪರು…!

ಇಂದಿನ ದಿನಮಾನದಲ್ಲಿ ಲವ್ ಮಾಡೋದು ಅದನ್ನು ಮುರಿದುಕೊಳ್ಳೋದು ಕಾಮನ್ ಆಗಿದೆ. ಆದರೆ ಹೃದಯದಾಳದಿಂದ ಬಂದಂತಹ ಪ್ರೀತಿ ಮುರಿದುಬಿದ್ದರೆ ಎಂಥವರಿಗಾದರೂ ಆಘಾತವಾಗದೇ ಇರದು.

ಆದ್ರೆ ಪ್ರೀತಿ ಮುರಿಯಿತೆಂದು ಜೀವನ ಕಳೆದುಕೊಳ್ಳುವ ಹಾಗಿಲ್ಲವಲ್ಲ….ಹೊಸ ಬದುಕು ಆರಂಭಿಸಲೇಬೇಕು. ಇಂಥ ಹೊಸ ಅಧ್ಯಾಯಕ್ಕೆ ಸ್ನೇಹಿತರು ಹುರಿದುಂಬಿಸಿದರೆ ಅದಿನ್ನೂಸುಲಭ. ಇಂಥದ್ದೇ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಹುಡುಗನೊಬ್ಬನ ಲವ್ ಬ್ರೇಕಪ್ ಆಗಿದ್ದನ್ನು ಆತನ ಸ್ನೇಹಿತರು ಭರ್ಜರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಇಲ್ಲಿನ ಕೋಮ್ಸ್ಯಾಟ್ಸ್ ಇನ್ ಸ್ಟಿಟ್ಯೂಶನ್ ಆಫ್ ಇನ್ಪರ್ಮೇಶನ್ ಟೆಕ್ನಾಲಜಿ ಹಾಗೂ ಸಿಐಐಟಿ ಕಾಲೇಜಿನ ಗೆಳೆಯರು ಸೇರಿ ಗೆಳೆಯನ ಲವ್ ಬ್ರೇಕಪ್ ಅನ್ನು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಅಲ್ಲದೇ ಸ್ನೋ ಸ್ಪ್ರೇ ಹೊಡೆದು ಎಂಜಾಯ್ ಮಾಡ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂಥ ಗೆಳೆಯರಿದ್ದಲ್ಲಿ ಬಹುಶಃ ಜೀವನದಲ್ಲಿ ಯಾವ ಸಮಸ್ಯೆಯೂ ದೊಡ್ಡದೆನಿಸುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...