alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನಂಚಿನಲ್ಲಿರುವ ಈ ಶೆಫ್ ಉತ್ಸಾಹ ಎಲ್ಲರಿಗೂ ಮಾದರಿ

29 ವರ್ಷದ ಪಾಕಿಸ್ತಾನದ ಶೆಫ್ ಫಾತಿಮಾ ಅಲಿ ಜೀವನದ ಕೊನೆ ದಿನಗಳನ್ನು ಎಣಿಸುತ್ತಿದ್ದಾಳೆ. ಸಾವಿನಂಚಿನಲ್ಲಿರುವ ಫಾತಿಮಾ ಜೀವನದಲ್ಲಿ ಸೋಲು ಕಂಡಿಲ್ಲ. ದಿಟ್ಟತನದಿಂದ ಹೋರಾಡುತ್ತಿರುವ ಆಕೆಯ ಉತ್ಸಾಹ ಎಲ್ಲರಿಗೂ ಮಾದರಿ.

ಹದಿಹರೆಯದಲ್ಲಿ ತಂದೆ-ತಾಯಿಯನ್ನು ಒಪ್ಪಿಸಿ ಅಮೆರಿಕಾಕ್ಕೆ ಹೋದ ಫಾತಿಮಾ, Cullinery ವಿಶ್ವವಿದ್ಯಾನಿಲಯದಲ್ಲಿ ಪಾಕಶಾಸ್ತ್ರ ಅಧ್ಯಯನ ಮಾಡಿದ್ಲು. ಫುಡ್ ನೆಟ್ವರ್ಕ್ ಟಿವಿ ಶೋ ಚೋಪ್ಡ್ ನಲ್ಲಿ ಪಾಲ್ಗೊಂಡು ಪ್ರಶಸ್ತಿ ಮುಡಿಗೇರಿಸಿಕೊಂಡ ಫಾತಿಮಾ, ಶೋನಲ್ಲಿ ಪಾಲ್ಗೊಂಡ ಮೊದಲ ಪಾಕಿಸ್ತಾನಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಟಾಪ್ ಶೆಫ್ ಶೋನಲ್ಲಿ ಪಾಲ್ಗೊಂಡಿದ್ದ ಫಾತಿಮಾ, 2017 ರಲ್ಲಿ ಆಘಾತಕಾರಿ ಸುದ್ದಿ ಎದುರಿಸಬೇಕಾಯ್ತು. ತನಗೆ ಎವಿಂಗ್ ಸರ್ಕೋಮಾ ಇದೆ ಎಂಬುದು ಗೊತ್ತಾಯ್ತು. ಇದೊಂದು ಮೂಳೆಗಳಿಗೆ ಸಂಬಂಧಿಸಿದ ಕ್ಯಾನ್ಸರ್ ಆಗಿದೆ. ಇನ್ನೊಂದು ವರ್ಷ ನಿನ್ನ ಕೈನಲ್ಲಿದೆ ಎಂದು ವೈದ್ಯರು ಮಾತು ಮುಗಿಸಿದ್ದಾರೆ.

ಇರುವ ಸಮಯವನ್ನು ಸುಂದರವಾಗಿ ಕಳೆಯಲು ಫಾತಿಮಾ ನಿರ್ಧರಿಸಿದ್ದಾಳೆ. ಅಡುಗೆ ಕಲೆ ಆಕೆ ಪ್ರಸಿದ್ಧಿಯನ್ನು ಹೆಚ್ಚು ಮಾಡಿದೆ. ವಿಶ್ವದ ಟಾಪ್ ಅಡುಗೆ ಶೋಗಳಲ್ಲಿ ಪಾಲ್ಗೊಂಡಿರುವ ಫಾತಿಮಾ ಎಲೆನ್ ಡಿಜೆನೆರೆಸ್ ಶೋಗೆ ಹೋಗಿ ಬಂದಿದ್ದಾಳೆ. ಅಲ್ಲಿ ಫಾತಿಮಾ ಅಂತಿಮ ಇಚ್ಛೆ ಈಡೇರಿಸಿಕೊಳ್ಳಲು ಹಾಗೂ ವಿಶ್ವ ಸುತ್ತಲೆಂದು 50 ಸಾವಿರ ಡಾಲರ್ ಹಣವನ್ನು ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...