alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನ ಏರ್ ಲೈನ್ಸ್ ಗೆ ಪ್ರಯಾಣಿಕರಿಂದ್ಲೇ ಟ್ರೋಲ್

ಪಾಕಿಸ್ತಾನ ಇಂಟರ್ ನ್ಯಾಶನಲ್ ಏರ್ ಲೈನ್ಸ್ ಜಾಹೀರಾತೊಂದು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಗೆ ತುತ್ತಾಗಿದೆ. PIA ಯಾವ ಕಾರಣಕ್ಕೆ ಗ್ರೇಟ್ ಅನ್ನೋದನ್ನು ಜಾಹೀರಾತಿನಲ್ಲಿ ವಿವರಿಸಲಾಗಿದೆ. ಇದುವರೆಗೂ ನೀವು PIA ವಿಮಾನದಲ್ಲಿ ಪ್ರಯಾಣಿಸಿಲ್ವಾ ಅಂತಾ ಪ್ರಶ್ನಿಸಲಾಗಿದೆ.

We are the only airline that flies directly to the most international destinations from Pakistan. We are the only…

Posted by Pakistan International Airlines on Tuesday, February 20, 2018

ಪಾಕಿಸ್ತಾನದಿಂದ ಬಹುತೇಕ ಎಲ್ಲಾ ಅಂತರಾಷ್ಟ್ರೀಯ ಸ್ಥಳಗಳಿಗೂ ಪ್ರಯಾಣಿಕರನ್ನು ಕೊಂಡೊಯ್ಯುವ ವಿಮಾನ ನಮ್ಮದೊಂದೇ. ನಮ್ಮಲ್ಲಿ ಅತಿ ದೊಡ್ಡ ವಿಮಾನಗಳಿವೆ. ನಿಜವಾದ ಬ್ಯುಸಿನೆಸ್ ಕ್ಲಾಸ್ ಇರೋ ವಿಮಾನ ನಮ್ಮದು. ಪ್ರಯಾಣಿಕರಿಗೆ ಅತ್ಯದ್ಭುತವಾದ ಆತಿಥ್ಯ ನೀಡುತ್ತೇವೆ ಅಂತೆಲ್ಲಾ ಜಾಹೀರಾತಿನಲ್ಲಿ ಸಂಸ್ಥೆ ತನ್ನನ್ನೇ ತಾನು ಹೊಗಳಿಕೊಂಡಿದೆ.

ಆದ್ರೆ ಪಾಕಿಸ್ತಾನ ಇಂಟರ್ ನ್ಯಾಶನಲ್ ಏರ್ ಲೈನ್ಸ್ ನ ಅಸಲಿಯತ್ತನ್ನು ಪ್ರಯಾಣಿಕರು ಫೇಸ್ಬುಕ್ ನಲ್ಲಿ ಬಹಿರಂಗಪಡಿಸಿದ್ದಾರೆ. ಪ್ರಯಾಣಿಕರು ಬ್ಲಾಂಕೆಟ್ ಕೇಳಿದ್ರೆ ಇದು ನಿಮ್ಮ ಮನೆಯಲ್ಲ ಎನ್ನುತ್ತಾರಂತೆ ವಿಮಾನ ಸಿಬ್ಬಂದಿ. ಅತಿ ದೊಡ್ಡ ವಿಮಾನ ಅನ್ನೋದೇನೋ ನಿಜ, ಆದ್ರೆ 10 ವರ್ಷ ಹಳೆಯದು ಎಂದಿದ್ದಾನೆ ಇನ್ನೊಬ್ಬ ಪ್ರಯಾಣಿಕ.

PIAನಲ್ಲಿ ಯಾವ್ಯಾವ ಸಮಸ್ಯೆಗಳಿವೆ, ಪ್ರಯಾಣಿಕರು ಯಾವ ರೀತಿ ತೊಂದರೆ ಅನುಭವಿಸ್ತಿದ್ದಾರೆ ಅನ್ನೊದನ್ನೆಲ್ಲ ಫೇಸ್ಬುಕ್ ನಲ್ಲಿ ಪ್ರಕಟಿಸಲಾಗಿದೆ. ಈ ಟ್ರೋಲ್ ನೋಡಿ ಯಾಕಾದ್ರೂ ಜಾಹೀರಾತು ಹಾಕಿದ್ನೋ ಎಂಬಂತಾಗಿದೆ ಏರ್ ಲೈನ್ಸ್ ಅಧಿಕಾರಿಗಳ ಸ್ಥಿತಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...