alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ನಲ್ಲಿ ಟೋಮೋಟೋ ಬೆಲೆ ಒಂದು ಕೆ.ಜಿ 300 ರೂಪಾಯಿ

ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಟೋಮೋಟೋ ಬೆಲೆ ಗಗನಕ್ಕೇರಿದೆ. ಒಂದು ಕೆ.ಜಿ ಟೋಮೋಟೋ ಬೆಲೆ 300 ರೂಪಾಯಿಗೆ ಬಂದ ನಿಂತಿದೆ. ಇಷ್ಟಾದ್ರೂ ಭಾರತದಿಂದ ಟೋಮೋಟೋ ಆಮದು ಮಾಡಿಕೊಳ್ಳುವುದಿಲ್ಲವೆಂದು ಪಾಕಿಸ್ತಾನದ ಆಹಾರ ಭದ್ರತಾ ಸಚಿವ ಸಿಕಂದರ್ ಹಯಾತ್ ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ಟೋಮೋಟೋ ಬೆಳೆ ಕಡಿಮೆಯಿದ್ದು ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬೆಲೆ ಗಗನಕ್ಕೇರಿದೆ. ಪ್ರತಿವರ್ಷ ಭಾರತದಿಂದ ಟೋಮೋಟೋವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದ್ರೆ ಈ ಬಾರಿ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಗಡಿಯಲ್ಲಿ ಗುಂಡಿನ ಮೊರೆತ ಕೇಳುತ್ತಿದೆ. ಹಾಗಾಗಿ ಆಮದಿಗೆ ನಿಷೇಧ ಹೇರಲಾಗಿದೆ.

ಬಲುಚಿಸ್ಥಾನ ಹಾಗೂ ಸಿಂಧ್ ಪ್ರಾಂತ್ಯದ ಬೆಳೆ ಮಾರುಕಟ್ಟೆಗೆ ಬಂದ್ರೆ ಟೋಮೋಟೋ ಬಿಕ್ಕಟ್ಟು ಪರಿಹಾರವಾಗಲಿದೆ ಎಂದಿರುವ ಸಚಿವರು ಭಾರತದಿಂದ ಬೆಳೆ ಆಮದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...