alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕನ ಮೇಲೆ ಕಿರುಕುಳ ಆರೋಪ : ಅಲ್ಲಿನ ಮಾಜಿ ಸ್ಟೂಡೆಂಟ್ ಈ ನಟಿ

ಪಾಕಿಸ್ತಾನದ ಇಸ್ಲಾಮಾಬಾದ್ ಬಹಾರಿಯಾ ಕಾಲೇಜ್ ಶಿಕ್ಷಕನೊಬ್ಬನ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಒಂದೇ ದಿನ 80 ವಿದ್ಯಾರ್ಥಿನಿಯರಿಗೆ ಶಿಕ್ಷಕ ಕಿರುಕುಳ ನೀಡಿದ್ದಾನೆಂದು ಆರೋಪ ಮಾಡಲಾಗಿದೆ. ಪಾಕಿಸ್ತಾನದ ಟಾಪ್ ನಟಿಯರಲ್ಲಿ ಒಂದಾಗಿರುವ ಮಾವ್ರಾ ಹೊಕೆನ್ ಕೂಡ ಈ ಕಾಲೇಜಿನಲ್ಲಿ ಕಲಿತಿದ್ದಾಳೆ.

ಶಿಕ್ಷಕ ಸದತ್ ಬಶೀರ್ ವಿರುದ್ಧ ದೂರು ದಾಖಲಾಗಿದೆ. ಸಬಾ ಅಲಿ ಹೆಸರಿನ ವಿದ್ಯಾರ್ಥಿನಿಯೊಬ್ಬಳು ಪತ್ರ ಬರೆದು ಶಿಕ್ಷಕನ ಬಣ್ಣ ಬಯಲು ಮಾಡಿದ್ದಾಳೆ. ಮೇ. 24ರಂದು ಘಟನೆ ನಡೆಸದಿದೆ. ಲ್ಯಾಬ್ ನಲ್ಲಿ ಘಟನೆ ನಡೆದಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿನಿಯರಿಗೆ ಕೆಟ್ಟ ಕಮೆಂಟ್ ಮಾಡಿದ ಶಿಕ್ಷಕ ಕೆಟ್ಟದಾಗಿ ನಡೆದುಕೊಂಡಿದ್ದಾನಂತೆ. ಈ ಬಗ್ಗೆ ದನಿ ಎತ್ತಲು ವಿದ್ಯಾರ್ಥಿನಿಯರು  ಭಯಪಡುತ್ತಿದ್ದರು. ಆದ್ರೆ ನಾನು ಧೈರ್ಯ ಮಾಡಿದ್ದೇನೆಂದು ಸಬಾ ಹೇಳಿದ್ದಾಳೆ.

ತಾನು ಕಲಿತ ಶಾಲೆಯಲ್ಲಾಗ್ತಿರುವ ಘಟನೆ ಬೇಸರ ತಂದಿದೆ ಎಂದು ನಟಿ ಮಾವ್ರಾ ಹೊಕೆನ್ ಟ್ವಿಟ್ ಮಾಡಿದ್ದಾಳೆ. ಬಾಲ್ಯದಲ್ಲಿ ಮಕ್ಕಳ ಜೊತೆ ಏನು ನಡೆಯುತ್ತಿದೆ. ನಾನು ಇದೇ ಶಾಲೆಯಲ್ಲಿ ಓದಿದ್ದೇನೆ. ಆಗೆಲ್ಲ ಮಕ್ಕಳು ಸುರಕ್ಷಿತವಾಗಿರುತ್ತಿದ್ದರು. ಬಶೀರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದು ನಟಿ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...