alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಸಂಸತ್ ನಲ್ಲಿ ಹಿಂದೂ ವಿವಾಹ ಮಸೂದೆ ಅಂಗೀಕಾರ

Wedding 5-3-09 Clise mansion, Hindu

ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹಿಂದು ಸಮುದಾಯಕ್ಕೆ ಪ್ರತ್ಯೇಕ ಕಾನೂನು ಹೊಂದಲು ಅವಕಾಶ ನೀಡಲಾಗಿದೆ. ಪಾಕ್ ಸಂಸತ್ ನಲ್ಲಿ ‘ಹಿಂದೂ ವಿವಾಹ ಮಸೂದೆ 2017’ ಕ್ಕೆ ಸರ್ವಾನುಮತದ ಅಂಗೀಕಾರ ದೊರೆತಿದೆ. ಕಳೆದ ವರ್ಷ ಸೆಪ್ಟೆಂಬರ್ 26ರಂದು ಮಸೂದೆಗೆ ನ್ಯಾಶನಲ್ ಅಸೆಂಬ್ಲಿಯಲ್ಲಿ ಅಂಗೀಕಾರ ದೊರೆತಿತ್ತು.

ಈ ಮಸೂದೆಯನ್ನು ಕಾಯ್ದೆಯಾಗಿ  ಪರಿವರ್ತಿಸಲು ಮುಂದಿನ ವಾರ ರಾಷ್ಟ್ರಪತಿಗಳು ಅಂಕಿತ ಹಾಕುವ ಸಾಧ್ಯತೆ ಇದೆ. ಈ ಕಾಯ್ದೆ ಜಾರಿಯಿಂದ ಪಾಕಿಸ್ತಾನದ ಹಿಂದು ಮಹಿಳೆಯರಿಗೆ ತಮ್ಮ ವಿವಾಹದ ಬಗ್ಗೆ ಅಧಿಕೃತ ದಾಖಲೆ ದೊರೆಯಲಿದೆ. ಪಾಕಿಸ್ತಾನದ ಪಂಜಾಬ್, ಬಲೂಚಿಸ್ತಾನ ಮತ್ತು ಖೈಬರ್ ಪಖ್ತೂನ್ಖ್ವಾದ ಹಿಂದುಗಳಿಗೆ ಈ ಕಾಯ್ದೆ ಅನ್ವಯವಾಗಲಿದೆ.

ಸಿಂಧ್ ನಲ್ಲಿ ಈ ಹಿಂದೆಯೇ ಹಿಂದೂ ವಿವಾಹ ಕಾಯ್ದೆ ಜಾರಿ ಮಾಡಲಾಗಿತ್ತು. ಪಾಕಿಸ್ತಾನದ ಕಾನೂನು ಸಚಿವ ಜಾಹೀದ್ ಹಮೀದ್ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ರು. ಪಾಕಿಸ್ತಾನದ ಹಿಂದುಗಳಿಗೆ ವೈಯಕ್ತಿಕ ಕುಟುಂಬ ಕಾನೂನು ಹೊಂದಲು ಇದುವರೆಗೂ ಅವಕಾಶ ನೀಡದೇ ಇರುವುದು ದುರದೃಷ್ಟಕರ ಅಂತಾ ಹಿರಿಯ ಸಂಸದರು ಅಭಿಪ್ರಾಯಪಟ್ರು. ‘ಶಾದಿ ಪರತ್’ ಹೆಸರಲ್ಲಿ ಹಿಂದೂ ವಿವಾಹ ಕಾಯ್ದೆ ಜಾರಿ ಮಾಡಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...