alex Certify
ಕನ್ನಡ ದುನಿಯಾ       Mobile App
       

Kannada Duniya

ರೂಮ್ ಸ್ವಚ್ಛಗೊಳಿಸದ ವಿದ್ಯಾರ್ಥಿನಿಗೆ ಇದೆಂತಾ ಶಿಕ್ಷೆ

pak

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶಿಕ್ಷಕರೇ ರಾಕ್ಷಸರಾಗಿದ್ದಾರೆ. ತರಗತಿ ಸ್ವಚ್ಛಗೊಳಿಸಲು ಒಪ್ಪದ ವಿದ್ಯಾರ್ಥಿನಿಯನ್ನು ಶಾಲಾ ಕಟ್ಟಡದಿಂದ ಕೆಳಕ್ಕೆ ತಳ್ಳಿದ್ದಾರೆ. 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಫಜ್ಜರ್ ನೂರ್ ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

ಮೇಲಿನಿಂದ ಬಿದ್ದ ರಭಸಕ್ಕೆ ವಿದ್ಯಾರ್ಥಿನಿ ಅಂಗಾಂಗಗಳೆಲ್ಲ ಮುರಿದು ಹೋಗಿದ್ದು, ಬೆನ್ನುಹುರಿ ಕೂಡ ತುಂಡಾಗಿದೆ. ಮೇ 23ರಂದು ಶಿಕ್ಷಕಿಯರಾದ ಬುಶ್ರಾ ಹಾಗೂ ರೆಹಾನಾ ತರಗತಿ ಸ್ವಚ್ಛ ಮಾಡುವಂತೆ ನೂರ್ ಗೆ ಸೂಚಿಸಿದ್ರು. ಆದ್ರೆ ಕೊಂಚ ಅನಾರೋಗ್ಯವಿದ್ದ ಕಾರಣ, ಇವತ್ತು ನನ್ನಿಂದ ಸಾಧ್ಯವಿಲ್ಲ ಇನ್ನೊಂದು ದಿನ ಮಾಡುತ್ತೇನೆ ಅಂತಾ ನೂರ್ ಮನವಿ ಮಾಡಿಕೊಂಡಿದ್ದಾಳೆ.

ಕೊನೆಗೆ ಶಿಕ್ಷಕಿಯರು ಬಾಲಕಿಯನ್ನು ಕೋಣೆಗೆ ಕರೆದೊಯ್ದು ಕಪಾಳಕ್ಕೆ ಬಾರಿಸಿದ್ದಾರೆ. ಅದಾದ್ಮೇಲೆ ಟೆರೆಸ್ ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಸ್ವಚ್ಛ ಮಾಡುವಂತೆ ಸೂಚಿಸಿದ್ದಾರೆ. ನೂರ್ ಒಪ್ಪದೇ ಇದ್ದಾಗ ಅವಳನ್ನು ಕಟ್ಟಡದ ಮೇಲಿನಿಂದ ಕೆಳಕ್ಕೆ ತಳ್ಳಿದ್ದಾರೆ. ಇಬ್ಬರು ಶಿಕ್ಷಕಿಯರ ವಿರುದ್ಧವೂ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ. ಆದ್ರೆ ಇದುವರೆಗೂ ಪೊಲೀಸರು ಶಿಕ್ಷಕಿಯರನ್ನು ಬಂಧಿಸಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...