alex Certify
ಕನ್ನಡ ದುನಿಯಾ       Mobile App
       

Kannada Duniya

‘ಶಿವರಾತ್ರಿ’ಗೆ ಭರ್ಜರಿ ‘ಉಡುಗೊರೆ’ ಕೊಟ್ಟ ಪಾಕ್

791a257b-65f2-4483-bed1-287506fbebf7

ಉಗ್ರ ನಾಯಕರ ವಿರೋಧದ ನಡುವೆಯೇ ಭಾರತದತ್ತ ಸ್ನೇಹ ಹಸ್ತ ಚಾಚಲು ಮುಂದಾಗುತ್ತಿರುವ ಪಾಕಿಸ್ತಾನ, ಜಲಗಡಿ ಉಲ್ಲಂಘನೆಯ ಆರೋಪದ ಮೇಲೆ ಪಾಕಿಸ್ತಾನದ ಜೈಲು ಸೇರಿದ್ದ 87 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವ ಮೂಲಕ ‘ಶಿವರಾತ್ರಿ’ಯ ಉಡುಗೊರೆ ನೀಡಿದೆ.

ಕಳೆದ ಎರಡು ವರ್ಷಗಳಿಂದ ಪಾಕ್ ಜೈಲಿನಲ್ಲಿ ಬಂಧಿಯಾಗಿದ್ದ ಈ 87 ಭಾರತೀಯ ಮೀನುಗಾರರನ್ನು ಭಾನುವಾರ ಬಿಡುಗಡೆ ಮಾಡಲಾಗಿದ್ದು, ಸೋಮವಾರ ಬೆಳಿಗ್ಗೆ ರೈಲಿನಲ್ಲಿ ಲಾಹೋರ್‌ ಗೆ ಕರೆ ತಂದು ತದನಂತರ ವಾಘಾ ಗಡಿಯಲ್ಲಿ ಪಾಕ್‌ ಅಧಿಕಾರಿಗಳು ಭಾರತೀಯ ಮೀನುಗಾರರನ್ನು ಗಡಿ ಭದ್ರತಾ ಪಡೆಗೆ ಹಸ್ತಾಂತರಿಸುವ ಮೂಲಕ ಭಾರತದ ಜತೆ ಉತ್ತಮ ಸಂಬಂಧ ಬೆಸೆಯುವ ಮುನ್ಸೂಚನೆಯನ್ನು ನೀಡಿದರು.

ವಿಶೇಷವೆಂದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅನಿರೀಕ್ಷಿತ ಪಾಕ್ ಭೇಟಿಯ ನಂತರ ಭಾರತದ ಕುರಿತು ಪಾಕ್ ನ ನಿಲುವು ಬದಲಾಗುತ್ತಿದ್ದು, ಹೀಗಾಗಿಯೇ ಈ 87 ಮಂದಿ ಮೀನುಗಾರರನ್ನೂ ಸೇರಿಸಿದಂತೆ ಒಟ್ಟು 457 ಭಾರತೀಯ ಮೀನುಗಾರರನ್ನು ಕರಾಚಿ ಜೈಲಿನಿಂದ ಪಾಕ್ ಸರ್ಕಾರ ಇಲ್ಲಿಯವರೆಗೆ ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...