alex Certify
ಕನ್ನಡ ದುನಿಯಾ       Mobile App
       

Kannada Duniya

‘ಆರೋಪ ಸಾಬೀತುಪಡಿಸಿ ಇಲ್ಲವೇ 1.8 ಕೋಟಿ ರೂ. ಪಾವತಿಸಿ’

im-pak-penlty

ಇಸ್ಲಾಮಾಬಾದ್: ಪಾಕಿಸ್ತಾನದ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದ ಆಯೇಷಾ ಗುಲಾಲೈ ಅವರಿಗೆ ಪಕ್ಷ ಸವಾಲ್ ಹಾಕಿದೆ.

ಇಮ್ರಾನ್ ಖಾನ್ ಮೇಲಿನ ಆರೋಪಗಳನ್ನು ಸಾಬೀತುಪಡಿಸಿ. ಇಲ್ಲವೇ 1.8 ಕೋಟಿ ರೂ. ಹಣ ಪಾವತಿಸಿ ಎಂದು ಪಕ್ಷದ ಮುಖಂಡರು ಲೀಗಲ್ ನೋಟಿಸ್ ಕಳಿಸಿದ್ದಾರೆ.

ಇಮ್ರಾನ್ ಖಾನ್ ತಮ್ಮ ಬ್ಲಾಕ್ ಬೆರ್ರಿ ಸೆಟ್ ನಿಂದ ಅಸಮರ್ಪಕವಾದ ಮೆಸೇಜ್ ಮಾಡಿದ್ದಾರೆ. ಅದನ್ನು ಪರಿಶೀಲಿಸಿದಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಆಯೇಷಾ ಹೇಳಿದ್ದರು.

ಪಕ್ಷ ಸೇರಿದಾಗಿನಿಂದ ಇಮ್ರಾನ್ ಖಾನ್ ಇದೇ ರೀತಿ ಮಾಡುತ್ತಿದ್ದಾರೆ. ನನ್ನಂತೆಯೇ ಇನ್ನೂ ಹಲವು ಮಹಿಳೆಯರಿಗೆ ಅಸಮರ್ಪಕ ಸಂದೇಶ ರವಾನಿಸಿದ್ದಾರೆ ಎಂದು ದೂರಿದ್ದರು.

ಆಯೇಷಾ ಮಾಡಿರುವ ಆರೋಪಗಳನ್ನು ಪಕ್ಷ ಸಂಪೂರ್ಣವಾಗಿ ನಿರಾಕರಿಸಿದೆ. ಆಯೇಷಾ ಅವರಿಗೆ ನೋಟಿಸ್ ನೀಡಿ, ನೀವು ಮಾಡಿರುವ ಆರೋಪಗಳನ್ನು ಸಾಬೀತುಪಡಿಸಿ ಎಂದು ಹೇಳಿದೆಯಲ್ಲದೇ, ಪಕ್ಷದ ಹುದ್ದೆಯನ್ನು ತೊರೆಯುವಂತೆ ಸೂಚಿಸಿದೆ. ಸುಳ್ಳು ಆರೋಪ ಮಾಡಿದ ಕಾರಣಕ್ಕಾಗಿ 30 ಮಿಲಿಯನ್ ಪಾಕಿಸ್ತಾನ ರೂಪಾಯಿ(ಸುಮಾರು 1.8 ಕೋಟಿ ರೂ.) ದಂಡ ಪಾವತಿಸುವಂತೆ ತಿಳಿಸಲಾಗಿದೆ. ಈ ನಡುವೆ ಪಾಕಿಸ್ತಾನದ ವಕೀಲರೊಬ್ಬರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಆಯೇಷಾ ಮಾಡಿರುವ ಆರೋಪಗಳ ಹಿನ್ನಲೆಯಲ್ಲಿ ಇಮ್ರಾನ್ ಖಾನ್ ಅವರನ್ನು ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...