alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಕಿಡ್ನಿಯಲ್ಲಿ ಕಲ್ಲು

nawaz-sharif

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಮೂತ್ರಕೋಶದಲ್ಲಿ ಕಲ್ಲು ಬೆಳೆದಿದೆಯಂತೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಷರೀಫ್ ತಪಾಸಣೆ ಮಾಡಿಸಿಕೊಂಡಿದ್ದು, ಕಿಡ್ನಿಯಲ್ಲಿ ಚಿಕ್ಕದೊಂದು ಕಲ್ಲು ಬೆಳೆದಿರೋದು ಪತ್ತೆಯಾಗಿದೆ. ಆದ್ರೆ ನವಾಜ್ ಷರೀಫ್ ಅವರಿಗೆ ಅನಾರೋಗ್ಯ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸಲಾಗ್ತಿದೆ ಅಂತಾ ಅವರ ಪುತ್ರಿ ಮರ್ಯಮ್ ನವಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

ಮಾಧ್ಯಮದವರು ಸಣ್ಣ ವಿಚಾರವನ್ನೇ ದೊಡ್ಡದು ಮಾಡ್ತಿದ್ದಾರೆ, ಅಲ್ಲಾನ ಕೃಪೆಯಿಂದ ಪ್ರಧಾನಿ ಆರೋಗ್ಯವಾಗಿದ್ದಾರೆ. ಆತಂಕಪಡುವಂಥದ್ದೇನೂ ಆಗಿಲ್ಲ ಅಂತಾ ಟ್ವೀಟ್ ಮಾಡಿದ್ದಾರೆ. ಪಾಕ್ ಪ್ರಧಾನಿಗೆ ಆಗಾಗ ಹೊಟ್ಟೆನೋವು ಬರ್ತಾ ಇತ್ತು. ಹಾಗಾಗಿ ಸಿಟಿ ಸ್ಕ್ಯಾನ್ ಮಾಡಿಸಿಕೊಂಡಿದ್ದಾರೆ. ಅವರ ಎಡಭಾಗದ ಕಿಡ್ನಿಯಲ್ಲಿ ಕಲ್ಲು ಬೆಳೆದಿರೋದು ಸ್ಕ್ಯಾನಿಂಗ್ ನಲ್ಲಿ ಪತ್ತೆಯಾಗಿದೆ.

ತಪಾಸಣೆ ಬಳಿಕ ಷರೀಫ್ ಗೆ ವೈದ್ಯರು ಕೆಲವೊಂದು ಡಯಟ್ ಸಲಹೆಗಳನ್ನು ನೀಡಿದ್ದಾರೆ. ಅದರಲ್ಲಿ ಕಿಡ್ನಿ ಸ್ಟೋನ್ ಕರಗದೇ ಇದ್ರೆ ಬೇರೆ ಚಿಕಿತ್ಸೆ ನೀಡಲಾಗುತ್ತದೆ. 2016ರಲ್ಲಿ ಪಾಕ್ ಪ್ರಧಾನಿ ಲಂಡನ್ ನಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತೀವ್ರ ಕೆಲಸದ ಒತ್ತಡದಿಂದಾಗಿ ಹೀಗಾಗಿದೆ ಅಂತಾ ಸಂಪುಟ ಸಚಿವರೊಬ್ಬರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...