alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಪ್ರಧಾನಿಗೆ ಅಮೆರಿಕಾ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ

ಕಳೆದ ವಾರ ಅಮೆರಿಕಾಕ್ಕೆ ಖಾಸಗಿ ಭೇಟಿ ನೀಡಿದ್ದ ಪಾಕ್ ಪ್ರಧಾನಿ ಶಾಹೀದ್ ಅಬ್ಬಾಸಿಯವರನ್ನು ಅಲ್ಲಿನ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೊಳಪಡಿಸಿರುವುದು ಪಾಕಿಸ್ತಾನದ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಕಳೆದೆರೆಡು ದಿನಗಳಿಂದ ಪಾಕ್ ದೃಶ್ಯ ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ವಿಡಿಯೋದಲ್ಲಿ ಶಾಹೀದ್ ಅಬ್ಬಾಸಿ ವಿಮಾನ ನಿಲ್ದಾಣದ ಭದ್ರತಾ ಕೊಠಡಿಯಿಂದ ತಮ್ಮ ಬ್ಯಾಗ್ ಹಾಗೂ ಕೋಟ್ ಎತ್ತಿಕೊಂಡು ಬರುತ್ತಿರುವ ದೃಶ್ಯವಿದೆ.

ಭಯೋತ್ಪಾದಕರಿಗೆ ಪಾಕಿಸ್ತಾನ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂಬ ಕಾರಣಕ್ಕೆ ಅಮೆರಿಕಾದ ಟ್ರಂಪ್ ಸರ್ಕಾರ, ನೆರವು ಸ್ಥಗಿತಗೊಳಿಸಿರುವುದು ಸೇರಿದಂತೆ ಹತ್ತಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇದೀಗ ಪಾಕ್ ಪ್ರಧಾನಿಯನ್ನೇ ಭದ್ರತಾ ತಪಾಸಣೆಗೊಳಪಡಿಸಿರುವುದು ಪಾಕ್ ಮಾಧ್ಯಮಗಳ ಆಕ್ರೋಶಕ್ಕೆ ಕಾರಣವಾಗಿದೆ.

ಶಾಹೀದ್ ಅಬ್ಬಾಸಿ ಅಮೆರಿಕಾಕ್ಕೆ ಖಾಸಗಿ ಭೇಟಿ ನೀಡಿದ್ದರಾದರೂ ಅವರು ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿದ್ದಾರೆ. ಅಲ್ಲದೇ 22 ಕೋಟಿ ಜನರನ್ನು ಪ್ರತಿನಿಧಿಸುತ್ತಿರುವ ಪಾಕ್ ಪ್ರಧಾನಿಯನ್ನು ಭದ್ರತಾ ತಪಾಸಣೆಗೊಳಪಡಿಸುವ ಮೂಲಕ ಪಾಕಿಸ್ತಾನಿಯರಿಗೆ ಅಮೆರಿಕಾ ಸರ್ಕಾರ ಅವಮಾನ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಸೋಮವಾರದಂದು ಪಾಕಿಸ್ತಾನದ 7 ಕಂಪನಿಗಳ ಮೇಲೆ ಅಮೆರಿಕಾ ನಿಷೇಧ ಹೇರಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...