alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣಾ ಸಭೆಯಲ್ಲಿ ಬಾಂಬ್ ದಾಳಿ: 14 ಮಂದಿ ಬಲಿ

ಪಾಕಿಸ್ತಾನ ದ ಪೇಶಾವರದ ಯಾಕತೂತ್ ಪ್ರಾಂತ್ಯದಲ್ಲಿ ಮಂಗಳವಾರದಂದು ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ದಾಳಿಯಲ್ಲಿ 14 ಜನ ಸಾವನ್ನಪ್ಪಿದ್ದು, 65 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಆತ್ಮಾಹುತಿ ಬಾಂಬ್ ದಾಳಿ ಚುನಾವಣಾ ಪ್ರಚಾರದ ಸಭೆಯಲ್ಲಿ ನಡೆದಿದ್ದು, ಇದರಲ್ಲಿ ಅವಾಮಿ ನ್ಯಾಷನಲ್ ಪಾರ್ಟಿಯ ನಾಯಕ ಹರೋನ್ ಬಿಲ್ಲೋರ್ ಸೇರಿದಂತೆ 14 ಜನ ಸಾವನ್ನಪ್ಪಿದ್ದಾರೆ. ಈ ಸಭೆಯಲ್ಲಿ 300 ಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡಿದ್ದರೆಂದು ಹೇಳಲಾಗಿದೆ.

ಈ ಹಿಂದೆ ಹರೋನ್ ಬಿಲೋರ್ ತಂದೆ ಸಹ ಇದೆ ಮಾದರಿಯ ಬಾಂಬ್ ದಾಳಿಯಲ್ಲಿ 2012 ರಲ್ಲಿ ಸಾವನ್ನಪ್ಪಿದ್ದು, ಈಗ ಪುತ್ರ ಕೂಡಾ ಸಾವಿಗೀಡಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...