alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಕ್ಯಾನ್ಸರ್ ಪೀಡಿತೆಗೆ ಸಿಕ್ಕಿಲ್ವಂತೆ ಭಾರತದ ವೀಸಾ

women

ಪಾಕಿಸ್ತಾನದ ಮಹಿಳೆಯೊಬ್ಬಳು ವೀಸಾ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಮೇಲೆ ಗಂಭೀರ ಆರೋಪ ಮಾಡಿದ್ದಾಳೆ. ಕ್ಯಾನ್ಸರ್ ಪೀಡಿತ ಮಗಳ ಚಿಕಿತ್ಸೆಗೆ ಭಾರತ ವೈದ್ಯಕೀಯ ವೀಸಾ ನೀಡಿಲ್ಲವೆಂದು ಮಹಿಳೆ ಆರೋಪ ಮಾಡಿದ್ದಾಳೆ.

ಮಹಿಳೆ ಪ್ರಕಾರ ಆಕೆಯ 25 ವರ್ಷದ ಮಗಳು ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ. ಆಕೆಗೆ ಭಾರತದಲ್ಲಿ ಚಿಕಿತ್ಸೆ ಕೊಡಿಸಲು ಮಹಿಳೆ ಬಯಸಿದ್ದಳಂತೆ. ಆದ್ರೆ ಭಾರತದ ರಾಯಭಾರಿ ಕಚೇರಿ ಉಭಯ ದೇಶಗಳ ನಡುವೆ ಸಂಬಂಧ ಹದಗೆಟ್ಟಿರುವ ಕಾರಣ ಹೇಳಿ ವೀಸಾ ನೀಡಲು ನಿರಾಕರಿಸಿದೆಯಂತೆ.

ಪಾಕಿಸ್ತಾನ್ ಪತ್ರಿಕೆ ಪ್ರಕಾರ, ಘಾಜಿಯಾಬಾದ್ ಇಂದ್ರಪ್ರಸ್ಥ ಡೆಂಟಲ್ ಕಾಲೇಜಿನಲ್ಲಿ ಪಾಕಿಸ್ತಾನದ ಫೈಜಾ ತನ್ವೀರ್ ಗೆ ಚಿಕಿತ್ಸೆ ನೀಡಲಾಗಿದೆ. ಆದ್ರೆ ಫೈಜಾ ಆರೋಗ್ಯ ಸುಧಾರಿಸಿಲ್ಲ. ಫೈಜಾ ತಾಯಿ ಫರ್ವೀನ್ ಭಾರತದಲ್ಲಿ ಚಿಕಿತ್ಸೆ ನೀಡಬಯಸಿದ್ದಾಳೆ. ಇದಕ್ಕಾಗಿ 20 ದಿನಗಳ ಮೆಡಿಕಲ್ ವೀಸಾ ಕೇಳಿದ್ದಳು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಪತ್ರ ಬರೆಯಿರಿ. ಅವರು ಒಪ್ಪಿಗೆ ನೀಡಿದ್ರೆ ವೀಸಾ ನೀಡುತ್ತೇವೆಂದು ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...