alex Certify
ಕನ್ನಡ ದುನಿಯಾ       Mobile App
       

Kannada Duniya

ನವಾಜ್ ಶರೀಫ್ ಹಾಗೂ ಮಗಳಿಗೆ ಜೈಲಿನಲ್ಲಿ ಸಿಗಲ್ಲ ಎಸಿ

ಪಾಕಿಸ್ತಾನದ ಕೋರ್ಟ್ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಹಾಗೂ ಮಗಳು ಮರ್ಯಮ್ ಶರೀಫ್ ಗೆ ಶಿಕ್ಷೆ ವಿಧಿಸಿದೆ. ಭ್ರಷ್ಟಾಚಾರ ಆರೋಪದ ಮೇಲೆ ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿದೆ. ಕೋರ್ಟ್ ಆದೇಶ ಹೊರ ಬರ್ತಿದ್ದಂತೆ ಪಾಕಿಸ್ತಾನ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ.

ನವಾಜ್ ಶರೀಫ್ ಪಕ್ಷ ಜುಲೈ 25 ರಂದು ನಡೆಯುವ ಚುನಾವಣೆಗೆ ಮರ್ಯಮ್ ಶರೀಫ್ ಹಾಗೂ ನವಾಜ್ ಶರೀಫ್ ಬದಲು ಇಬ್ಬರು ಅನ್ಯ ವ್ಯಕ್ತಿಗಳನ್ನು ಚುನಾವಣಾ ಕಣಕ್ಕಿಳಿಸಲು ತಯಾರಿ ನಡೆಸಿದೆ.

ಇನ್ನೊಂದೆಡೆ ಪಾಕಿಸ್ತಾನ ಗೃಹ ಸಚಿವಾಲಯ ನವಾಜ್ ಶರೀಫ್ ಹಾಗೂ ಮರ್ಯಮ್ ಶರೀಫ್ ಪಾಕಿಸ್ತಾನಕ್ಕೆ ಬರ್ತಿದ್ದಂತೆ ಜೈಲಿಗಟ್ಟಲು ಎಲ್ಲ ತಯಾರಿ ನಡೆಸಿದೆ. ನವಾಜ್ ಹಾಗೂ ಮಗಳು ಲಾಹೋರ್ ಗೆ ಬರ್ತಿದ್ದಂತೆ ಅವ್ರನ್ನು ಬಂಧಿಸಲಾಗುವುದು. ನವಾಜ್ ಶರೀಫ್ ಸಂಸತ್ ನ ಮಾಜಿ ಸದಸ್ಯರಾಗಿದ್ದ ಕಾರಣ ಅವರನ್ನು ಉತ್ತಮ ವರ್ಗದ ಸೆಲ್ ನಲ್ಲಿರಿಸಲಾಗುವುದು. ಮರ್ಯಮ್ ಕೂಡ ಐಷಾರಾಮಿ ವ್ಯವಸ್ಥೆ ಬಯಸಿದ್ರೆ ಮೊದಲು ವರ್ಷಕ್ಕೆ 6 ಲಕ್ಷಕ್ಕೂ ಹೆಚ್ಚು ತೆರಿಗೆಯನ್ನು ಕಟ್ಟುತ್ತಿದ್ದೇನೆಂಬ ದಾಖಲೆಯನ್ನು ತೋರಿಸಬೇಕಾಗುತ್ತದೆ. ಆದ್ರೆ ಇಬ್ಬರಿಗೂ ಎಸಿ ಕೋಚ್ ಸಿಗೋದಿಲ್ಲವೆಂದು ಮೂಲಗಳು ಹೇಳಿವೆ.

ನವಾಜ್ ಶರೀಫ್ ಗೆ 10 ವರ್ಷ ಹಾಗೂ ಮರ್ಯಮ್ ಗೆ 7 ವರ್ಷ ಜೈಲು ಶಿಕ್ಷೆಯಾಗಿದೆ. ಸದ್ಯ ಲಂಡನ್ ನಲ್ಲಿರುವ ತಂದೆ-ಮಗಳು 10 ದಿನಗಳೊಳಗೆ ಪಾಕಿಸ್ತಾನಕ್ಕೆ ವಾಪಸ್ ಬರುವುದಾಗಿ ಹೇಳಿಕೆ ನೀಡಿದ್ದಾರೆ. ನವಾಜ್ ಶರೀಫ್  ಅಳಿಯ ಈಗಾಗಲೇ ಜೈಲು ಸೇರಿದ್ದಾನೆ. ಪಾಕಿಸ್ತಾನದ ಜೈಲನ್ನು ಎರಡು ವರ್ಗವಾಗಿ ವಿಂಗಡಿಸಲಾಗಿದೆ. ಸಾಮಾನ್ಯ ವರ್ಗ ಹಾಗೂ ಉನ್ನತ ವರ್ಗ. ಸಾಮಾನ್ಯ ವರ್ಗದಲ್ಲಿರುವ ಜನರು ಉನ್ನತ ವರ್ಗದ ಜೈಲಿಗೆ ಕಳುಹಿಸುವಂತೆ ಮನವಿ ಸಲ್ಲಿಸಬಹುದು. ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡಿದ್ರೆ ಅವ್ರನ್ನು ಉನ್ನತ ಜೈಲಿಗೆ ಕಳುಹಿಸಲಾಗುವುದು. ಆದ್ರೆ ಈವರೆಗೂ ನವಾಜ್ ಶರೀಫ್  ಅಳಿಯ ಸಾಮಾನ್ಯ ಜೈಲಿನಲ್ಲಿದ್ದಾನೆಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...