alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದೂ ದೇವಸ್ಥಾನದಲ್ಲಿ ಮುಸ್ಲಿಂ ಶಿಕ್ಷಕಿಯಿಂದ ಪಾಠ

ಪಾಕಿಸ್ತಾನದ ಕರಾಚಿಯಲ್ಲಿರುವ ಒಂದು ದೇವಸ್ಥಾನ ಹಾಗೂ ಅದ್ರಲ್ಲಿರುವ ಒಂದು ಶಾಲೆ ವಿಶ್ವದ ಜನರ ಗಮನ ಸೆಳೆದಿದೆ. ಅನಮ್ ಆಘಾ ಹೆಸರಿನ ಮುಸ್ಲಿಂ ಶಿಕ್ಷಕಿಯೊಬ್ಬರು ಹಿಂದೂ ಮಕ್ಕಳಿಗೆ ಪಾಠ ಹೇಳಿಕೊಡ್ತಿದ್ದಾರೆ. ಶಾಲೆಗೆ ಬರ್ತಿದ್ದಂತೆ ಶಿಕ್ಷಕಿ ಸಲಾಂ ಅಂದ್ರೆ ಮಕ್ಕಳು ಜೈ ಶ್ರೀರಾಮ್ ಎನ್ನುತ್ತಾರೆ.

ಹಿಂದೂ ವಸಾಹುತು ಮಧ್ಯವೇ ದೇವಸ್ಥಾನವಿದೆ. ಇಲ್ಲಿ ಸುಮಾರು 90 ಹಿಂದೂ ಕುಟುಂಬಗಳು ನೆಲೆಸಿವೆ. ಶಿಕ್ಷಕಿಯನ್ನು ಕೋಪದಿಂದ ನೋಡುವವರ ಸಂಖ್ಯೆ ಹೆಚ್ಚಿದೆ. ಅಲ್ಪ ಸಂಖ್ಯಾತ ಮಕ್ಕಳಿಗೆ ಶಿಕ್ಷಣ ಹೇಳಿಕೊಡ್ತಿರುವ ಶಿಕ್ಷಕಿ ಅನಮ್ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ದೇವಸ್ಥಾನದಲ್ಲಿ ಶಾಲೆ ನಡೆಯುತ್ತಿದೆ ಎಂಬ ಸಂಗತಿ ತಿಳಿದು ಅನೇಕರು ವಿರೋಧ ವ್ಯಕ್ತಪಡಿಸಿದ್ದರಂತೆ. ಸುತ್ತಮುತ್ತಲ ಮುಸ್ಲಿಮರಿಗೆ ಹಿಂದುಗಳ ಜೊತೆ ಬೆರೆಯುವುದು ಇಷ್ಟವಿಲ್ಲವಂತೆ. ಆದ್ರೆ ಮಕ್ಕಳು ಶಿಕ್ಷಣ ಪಡೆಯಲು ಮುಂದೆ ಬಂದಿದ್ದಾರಂತೆ. ಮಕ್ಕಳು ಈ ಹಿಂದೆ ಶಾಲೆಗಳಿಗೆ ಹೋಗಿದ್ದರು. ಆದ್ರೆ ಧರ್ಮ ಅವ್ರ ಶಿಕ್ಷಣಕ್ಕೆ ಅಡ್ಡಿಯಾಯ್ತು. ಹಾಗಾಗಿ ನಾನು ಶಿಕ್ಷಣ ನೀಡುತ್ತಿದ್ದೇನೆ. ಧರ್ಮದ ಬಗ್ಗೆ ಯಾವುದೇ ಪಾಠ ಮಾಡುತ್ತಿಲ್ಲವೆಂದು ಶಿಕ್ಷಕಿ ಹೇಳಿದ್ದಾರೆ. ಶಿಕ್ಷಕಿ ಈ ಸೇವೆಗೆ ಹಿಂದುಗಳು ತುಂಬಾ ಖುಷಿ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...