alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪಾಕ್ ಸಚಿವ

ಪಾಕಿಸ್ತಾನದ ಸಚಿವ ಮತ್ತವರ ಪತ್ನಿ ಶವವಾಗಿ ಪತ್ತೆಯಾಗಿದ್ದಾರೆ. ಸಚಿವ ಮಿರ್ ಹಜಾರ್ ಖಾನ್ ಬಿಜರಾನಿ ಪತ್ನಿಯನ್ನು ಕೊಂದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ.

ಕರಾಚಿಯ ನಿವಾಸದಲ್ಲಿ ಬಿಜರಾನಿ ಮತ್ತವರ ಪತ್ನಿ ಫರಿಹಾ ರಜಾಕ್ ಮೃತದೇಹ ದೊರೆತಿದೆ. ಕೌಟುಂಬಿಕ ಕಲಹವೇ ಅವರ ಸಾವಿಗೆ ಕಾರಣವಿರಬಹುದು ಅಂತಾ ಪೊಲೀಸರು ಶಂಕಿಸಿದ್ದಾರೆ.

ಇಬ್ಬರ ದೇಹದಲ್ಲೂ ಒಂದೇ ಪಿಸ್ತೂಲ್ ನಿಂದ ಸಿಡಿದಿರುವ ಗುಂಡುಗಳು ಸಿಕ್ಕಿವೆ. ಫರಿಹಾ ರಜಾಕ್ ದೇಹದಲ್ಲಿ ಮೂರು ಗುಂಡುಗಳಿದ್ವು. ಆದ್ರೆ ಸಚಿವ ಬಿಜರಾನಿ ಅವರ ತಲೆಗೆ ಒಂದು ಗುಂಡು ಹೊಕ್ಕಿತ್ತು.

ಹಾಗಾಗಿ ಬಿಜರಾನಿಯೇ ಪತ್ನಿ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗ್ತಿದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಬಿಜರಾನಿ ಸಿಂಧ್ ಪ್ರದೇಶದಲ್ಲಿ ಸಚಿವರಾಗಿದ್ರು. ಅವರ ಪತ್ನಿ ಫರಿಹಾ ಪತ್ರಕರ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...