alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜಿಗೆ ಮೊಬೈಲ್ ತಂದವರಿಗಾದ ಗತಿಯೇನು…?

ಪಾಕಿಸ್ತಾನದ ವೈದ್ಯಕೀಯ ಕಾಲೇಜಿನಲ್ಲಿ ಆಡಳಿತ ಮಂಡಳಿ ವಿದ್ಯಾರ್ಥಿಗಳ ಮೊಬೈಲ್ ಗಳನ್ನೆಲ್ಲ ಜಜ್ಜಿ ಚೂರು ಚೂರು ಮಾಡಿದೆ. ಕಲ್ಲುಗಳಿಂದ ಹೊಡೆದು ಮೊಬೈಲ್ ನಾಶ ಮಾಡ್ತಿರೋ ವಿಡಿಯೋ ವೈರಲ್ ಆಗಿದೆ. Avicenna Medical Collageನಲ್ಲಿ ನಡೆದ ಘಟನೆ ಇದು.

ವಿದ್ಯಾರ್ಥಿಗಳು ಕಾಲೇಜು ಆವರಣದೊಳಗೆ ಮೊಬೈಲ್ ತರಬಾರದು ಅನ್ನೋ ನಿಯಮವಿದೆ. ಹಾಗಂತ ಅವರ ಅಮೂಲ್ಯ ವಸ್ತುವನ್ನು ಈ ರೀತಿ ಹಾಳು ಮಾಡುವುದು ಸರಿಯಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಮೆಡಿಕಲ್ ಕಾಲೇಜಿನ ಡೀನ್ ನಿಜಕ್ಕೂ ಸೈಕೋ ಅಂತಾ ಜಾಲತಾಣದಲ್ಲಿ ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದು ನೈತಿಕ ಪೊಲೀಸ್ ಗಿರಿ ಅನ್ನೋದು ಹಲವರ ವಾದ. ಆದ್ರೆ ಪಾಕಿಸ್ತಾನದ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಹೇಳೋದೇ ಬೇರೆ. ಮೊಬೈಲ್ ಫೋನ್ ಗಳು ಕಾಲೇಜಿನ ಕಲಿಕಾ ವಾತಾವರಣವನ್ನೇ ಹಾಳು ಮಾಡುತ್ತವೆ.

ಹಾಗಾಗಿ ಕ್ಯಾಮರಾ ಇರುವ ಸ್ಮಾರ್ಟ್ ಫೋನ್ ಅನ್ನು ಕಾಲೇಜಿನೊಳಗೆ ತರಲು ಅವಕಾಶವಿಲ್ಲ. ಕ್ಯಾಮರಾ ಇಲ್ಲದ ಮೊಬೈಲ್ ಗಳನ್ನು ಕ್ಯಾಂಪಸ್ ನೊಳಗೆ ಬಳಸಬಹುದು ಅಂತಾ ಪ್ರಾಧ್ಯಾಪಕರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...