alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಗುಪ್ತಾಂಗವನ್ನೇ ಕತ್ತರಿಸಿದ ಕ್ರೂರಿ

ಚಿನ್ನದ ಓಲೆಗಳನ್ನು ಕೊಡಲಿಲ್ಲ ಅನ್ನೋ ಕಾರಣಕ್ಕೆ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಜನನಾಂಗವನ್ನೇ ಘಾಸಿಗೊಳಿಸಿದ್ದಾನೆ.  ಪಾಕಿಸ್ತಾನದ ಡೇರಾ ಘಾಜಿ ಖಾನ್ ಎಂಬಲ್ಲಿ ಈ ಕೃತ್ಯ ನಡೆದಿದೆ. ಪೊಲೀಸರು ಈಗಾಗ್ಲೇ ಆರೋಪಿಯನ್ನು ಬಂಧಿಸಿದ್ದಾರೆ.

ದಂಪತಿಗೆ ಮಕ್ಕಳಿರಲಿಲ್ಲ, ಇದೇ ಕಾರಣಕ್ಕೆ ಆಗಾಗ ಜಗಳವಾಗುತ್ತಿತ್ತು. ಆದ್ರೆ ನಿನ್ನೆ ಪತ್ನಿಯ ಬಳಿ ಚಿನ್ನದ ಓಲೆಯನ್ನು ವಾಪಸ್ ಕೊಡುವಂತೆ ಪತಿ ಕೇಳಿದ್ದ. ಅದಕ್ಕೆ ಆಕೆ ಒಪ್ಪದೇ ಇದ್ದಾಗ ಕೋಣೆಯಲ್ಲಿ ಆಕೆಯನ್ನು ಕೂಡಿ ಹಾಕಿಕೊಂಡು, ಮನಬಂದಂತೆ ಥಳಿಸಿದ್ದಾನೆ.

ಅಲ್ಲೇ ಸಮೀಪದಲ್ಲಿದ್ದ ಮಹಿಳೆಯ ಚಿಕ್ಕಪ್ಪ, ಚಿಕ್ಕಮ್ಮ ಅವಳ ಅಳು ಕೇಳಿ ಧಾವಿಸಿ ಬಂದ್ರು. ಕೋಣೆಯ ಬಾಗಿಲು ಮುಚ್ಚಿತ್ತು, ಎಷ್ಟು ಕರೆದರೂ ಬಾಗಿಲು ತೆರಯದೇ ಇದ್ದಾಗ ನೆರೆಹೊರೆಯವರೆಲ್ಲ ಸೇರಿ ಬಾಗಿಲು ಒಡೆದಿದ್ದಾರೆ.

ಮಹಿಳೆ ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ್ಲು. ಪಾಪಿ ಪತಿ ಆಕೆಯ ಗುಪ್ತಾಂಗವನ್ನೇ ಕತ್ತರಿಸಿ ಹಾಕಿದ್ದ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಈ ಹಿಂದೆ ಕೂಡ ಹಲವು ಬಾರಿ ಆತ ಪತ್ನಿ ಮೇಲೆ ಹಲ್ಲೆ ಮಾಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...