alex Certify
ಕನ್ನಡ ದುನಿಯಾ       Mobile App
       

Kannada Duniya

25 ವರ್ಷಗಳಿಂದ ಈತ ಊಟವನ್ನೇ ಮಾಡಿಲ್ಲ..!

pak-ele

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ವ್ಯಕ್ತಿಯೊಬ್ಬ, ಕಳೆದ 25 ವರ್ಷಗಳಿಂದ ಅನ್ನವನ್ನೇ ಮುಟ್ಟಿಲ್ಲ.

ಗಿಡಗಳ ಎಲೆಗಳನ್ನೇ ತಿಂದು ಬದುಕುತ್ತಿದ್ದಾನೆ. ಗುಜ್ರಾನ್ ವಾಲಾದ ಮೆಹಮೂದ್ ಬಟ್(50) ಎಲೆಗಳನ್ನು ತಿಂದು ಬದುಕಿದ್ದು, ಆತನಿಗೆ ಒಂದು ಸಣ್ಣ ಕಾಯಿಲೆಯೂ ಕಾಣಿಸಿಕೊಂಡಿಲ್ಲ.

ಬಡ ಕುಟುಂಬದ ಮೆಹಮೂದ್ ಗೆ ಜೀವನ ನಡೆಸುವುದು ಕಷ್ಟವಾದಾಗ, ಭಿಕ್ಷೆ ಬೇಡಲು ಮುಂದಾಗಿದ್ದರು. ಆದರೆ, ಮನಸ್ಸು ಒಪ್ಪದ ಕಾರಣ, ಗಿಡದ ಎಲೆಗಳನ್ನು ತಿನ್ನುವುದನ್ನು ರೂಢಿಸಿಕೊಂಡಿದ್ದಾರೆ.

ಹೀಗೆ ಕಳೆದ 25 ವರ್ಷಗಳಿಂದ ಎಲೆಗಳೇ ಅವರಿಗೆ ಆಹಾರವಾಗಿದ್ದು, ಸದ್ಯ ಕತ್ತೆ ಗಾಡಿಯಲ್ಲಿ ಸಾಮಾನುಗಳನ್ನು ಸಾಗಿಸುವ ಕೆಲಸ ಮಾಡುತ್ತಿದ್ದಾರೆ.

ಈಗ ಕೆಲಸ, ಸಂಪಾದನೆ ಎಲ್ಲಾ ಇದ್ದರೂ, ಎಲೆ ತಿನ್ನುವುದನ್ನು ಮಾತ್ರ ಬಿಟ್ಟಿಲ್ಲ. ಹಸಿವಾದ ಕೂಡಲೇ ಸಮೀಪದ ಗಿಡ, ಮರಗಳಲ್ಲಿನ ಎಲೆಗಳನ್ನು ಕಿತ್ತು ತಿನ್ನುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...