alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಮದುವೆ ದಿನದಂದೇ ಪತ್ನಿಯ ಸಂದರ್ಶನ ಮಾಡಿದ್ದಾನೆ ವರ

ಪಾಕಿಸ್ತಾನದ ಪತ್ರಕರ್ತನೊಬ್ಬ ಇಂಟರ್ನೆಟ್ ಮೂಲಕ ಮನೆಮಾತಾಗಿದ್ದಾನೆ. ತನ್ನ ಮದುವೆ ಸುದ್ದಿಯನ್ನೇ ಬ್ರೇಕಿಂಗ್ ನ್ಯೂಸ್ ಆಗಿ ಪ್ರಕಟಿಸಿರುವುದೇ ಇದಕ್ಕೆ ಕಾರಣ.

ವರ ಹನನ್ ಬುಖಾರಿ ‘ಸಿಟಿ 41’ ಸುದ್ದಿ ವಾಹಿನಿಯ ವರದಿಗಾರ. ತನ್ನ ಮದುವೆ ವಿಚಾರವನ್ನೇ ಇವನು ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರಿಸಿದ್ದಾನೆ. ಮದುವೆಯ ತಯಾರಿಗಳು ಹೇಗಿವೆ ಅನ್ನೋದನ್ನು ವಿವರಿಸಿದ್ದಾನೆ. ಅಷ್ಟೇ ಅಲ್ಲ ತಂದೆ-ತಾಯಿ, ಅತ್ತೆ-ಮಾವ, ಪತ್ನಿ ಎಲ್ಲರನ್ನೂ ಸಂದರ್ಶನ ಮಾಡಿದ್ದಾನೆ.

ತನ್ನನ್ನು ಮದುವೆಯಾಗ್ತಿರೋದು ಹೇಗನ್ನಿಸ್ತಿದೆ ಅಂತಾ ಪತ್ನಿ ಬಳಿ ಕೇಳಿದ್ದಾನೆ. ಅದಕ್ಕೆ ಉತ್ತರಿಸಿದ ವಧು, ತಾನು ಫುಲ್ ಖುಷ್ ಅಂತಾ ಹೇಳಿದ್ದಾಳೆ. ಭವಿಷ್ಯದಲ್ಲೂ ನನ್ನನ್ನು ಖುಷಿಯಾಗಿಡುತ್ತೀರಾ ಎಂಬ ನಂಬಿಕೆ ಇದೆ ಎಂದಿದ್ದಾಳೆ.

ಟ್ವಿಟ್ಟರ್ ನಲ್ಲಿ ಕೆಲವರು ಈ ವಿಡಿಯೋ ನೋಡಿ ಟೀಕೆ ಕೂಡ ಮಾಡಿದ್ದಾರೆ. ಪತ್ರಿಕೋದ್ಯಮ ಎಲ್ಲಿಗೆ ಬಂದು ತಲುಪಿದೆ ಅಂತಾ ವಿಷಾದ ವ್ಯಕ್ತಪಡಿಸಿದ್ದಾರೆ. ಪತ್ರಕರ್ತನೊಬ್ಬ ತನ್ನದೇ ಮದುವೆ ಬಗ್ಗೆ ವರದಿ ಮಾಡೋದು ಪಾಕಿಸ್ತಾನದಲ್ಲಿ ಮಾತ್ರ ಸಾಧ್ಯ ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...