alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಶ್ಮೀರಿ ಉಗ್ರನ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪಾಕ್

ಮತ್ತೊಮ್ಮೆ ನೆರೆಯ ಪಾಕಿಸ್ತಾನ ತನ್ನ ಧೂರ್ತ ಬುದ್ಧಿ ಪ್ರದರ್ಶಿಸಿದೆ. ಕಾಶ್ಮೀರದ ಉಗ್ರ ಬುರ್ಹಾನ್ ವಾನಿಯ ಸಹಿತ ಭಾರತೀಯ ಸೇನೆಯಿಂದ ಹತರಾದ 20 ಮಂದಿ ಭಯೋತ್ಪಾದಕರ ಅಂಚೆಚೀಟಿಗಳನ್ನು ಪಾಕಿಸ್ತಾನ ಬಿಡುಗಡೆಗೊಳಿಸಿದ್ದು, ಇವರನ್ನು ಹುತಾತ್ಮರು ಎಂದು ಬಿಂಬಿಸಿದೆ.

ಭಾರತದ ದಬ್ಬಾಳಿಕೆ ವಿರುದ್ಧ ಹೋರಾಡಿ ಹುತಾತ್ಮರಾದವರನ್ನು ಸ್ಮರಿಸುವ ಸಲುವಾಗಿ ತಾನು ಈ ಅಂಚೆಚೀಟಿಗಳನ್ನು ಬಿಡುಗೊಳಿಸುತ್ತಿರುವುದಾಗಿ ಪಾಕ್ ಸರ್ಕಾರ ಹೇಳಿಕೊಂಡಿದೆ.

ಈ 20 ಸ್ಟಾಂಪ್‌ಗಳು ಇ-ಕಾಮರ್ಸ್ ತಾಣ ಇ-ಬೇ ನಲ್ಲಿ 6.99 ಡಾಲರ್ (500 ರೂ.) ಗೆ ಮಾರಾಟಕ್ಕೆ ಇದೆ. ಪಾಕಿಸ್ತಾನದಲ್ಲಿ 8 ರೂ.ಗೆ ಮಾರಾಟಕ್ಕೆ ಇಡಲಾಗಿದೆ. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಮನಿಷ್ ತಿವಾರಿ, ಉಗ್ರ ಬುರ್ಹಾನ್ ವಾನಿಯನ್ನು ಹುತಾತ್ಮನೆಂದು ಬಿಂಬಿಸಿ ಪಾಕಿಸ್ತಾನ ಅಂಚೆಚೀಟಿ ಹೊರತಂದ ಕ್ರಮ ಭಾರತದ ಸಾರ್ವಭೌಮತ್ವದ ಮೇಲೆ ಎಸಗಿದ ಆಕ್ರಮಣವಾಗಿದೆ ಎಂದು ಜರೆದಿದ್ದಾರೆ.

ಯೋಧರ ತಲೆ ಕಡಿಯುತ್ತಾರೆ, ಭಯೋತ್ಪಾದಕರ ಅಂಚೆಚೀಟಿ ಬಿಡುಗಡೆಗೊಳಿಸುತ್ತಾರೆ, ಬಳಿಕ ಮಾತುಕತೆಗೆ ಆಹ್ವಾನಿಸುತ್ತಾರೆ. ಇದಕ್ಕೆ ಭಾರತ ಸರ್ಕಾರದ ವಿದೇಶಾಂಗ ನೀತಿ ದುರ್ಬಲವಾಗಿರುವುದೇ ಕಾರಣ ಎಂದು ಮನೀಶ್ ತಿವಾರಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...