alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಜ್ಯೋತಿಷಿ ಭವಿಷ್ಯಕ್ಕೆ ತಲೆಕೆಡಿಸಿಕೊಂಡಿದೆ ಪಾಕ್

ಕಳೆದ ಶುಕ್ರವಾರ ಪಾಕಿಸ್ತಾನದ ಪೇಶಾವರದಲ್ಲಿ ಉಗ್ರರ ದಾಳಿ ನಡೆದಿದೆ. ಅಚ್ಚರಿಯ ವಿಷಯ ಏನು ಗೊತ್ತಾ…? ಈ ದಾಳಿ ಬಗ್ಗೆ ಅಕ್ಟೋಬರ್ ನಲ್ಲೇ ಭಾರತೀಯನೆಂದು ಹೇಳಿಕೊಳ್ತಿರೋ ಜ್ಯೋತಿಷಿಯೊಬ್ರು ಭವಿಷ್ಯ ನುಡಿದಿದ್ರು. ಅಷ್ಟೇ ಅಲ್ಲ ಫೆಬ್ರವರಿ ತಿಂಗಳು ಅಂತ್ಯವಾಗುವುದರೊಳಗೆ ಅಂತಹ 5 ಭಾರೀ ಭಯೋತ್ಪಾದಕ ದಾಳಿಗಳು ನಡೆಯಲಿವೆ ಅಂತಾ ಜ್ಯೋತಿಷಿ ಹೇಳಿದ್ದಾರೆ.

ಇದು ಪಾಕಿಸ್ತಾನವನ್ನು ಆತಂಕಕ್ಕೆ ದೂಡಿದೆ. ಅಷ್ಟೇ ಅಲ್ಲ ಭಾರತದತ್ತ ಬೊಟ್ಟು ಮಾಡಲು ಮತ್ತೊಂದು ಸಬೂಬು ಸಿಕ್ಕಂತಾಗಿದೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳ ಹಿಂದೆ ಭಾರತದ ಗುಪ್ತಚರ ಇಲಾಖೆಯ ಕೈವಾಡವಿದೆ ಅನ್ನೋದಕ್ಕೆ ಇದೇ ಸಾಕ್ಷಿ ಎನ್ನುತ್ತಿದೆ ಶತ್ರುರಾಷ್ಟ್ರ.

ಅನಿರುಧ್ ಕುಮಾರ್ ಮಿಶ್ರಾ ಎಂಬ ಜ್ಯೋತಿಷಿ, ನವೆಂಬರ್ ಅಂತ್ಯದೊಳಗೆ ಪಾಕಿಸ್ತಾನದಲ್ಲಿ ಉಗ್ರರ ದಾಳಿ ನಡೆಯಲಿದೆ ಅಂತಾ ಅಕ್ಟೋಬರ್ 13ರಂದು ಟ್ವೀಟ್ ಮಾಡಿದ್ದರು. ಇದನ್ನು ಪಾಕಿಸ್ತಾನದ ಡಾನ್ ಪತ್ರಿಕೆಗೆ ಟ್ಯಾಗ್ ಕೂಡ ಮಾಡಿದ್ದರು. ಆದ್ರೆ ಜ್ಯೋತಿಷಿಯ ಲೆಕ್ಕಾಚಾರ ಒಂದು ದಿನ ಏರುಪೇರಾಗಿದೆ.

ನವೆಂಬರ್ ನಲ್ಲಲ್ಲ, ಡಿಸೆಂಬರ್ 1ರಂದು ಪೇಶಾವರದ ಕೃಷಿ ವಿವಿಗೆ ಬುರ್ಖಾ ಧರಿಸಿ ಬಂದ ಉಗ್ರರು 13 ಜನರನ್ನು ಹತ್ಯೆ ಮಾಡಿದ್ದಾರೆ. ಪಾಕಿಸ್ತಾನದ ರಾಜಕಾರಣಿಗಳೆಲ್ಲ ಈಗ ತಲೆಕೆಡಿಸಿಕೊಂಡಿದ್ದಾರೆ. ಪಾಕ್ ನಲ್ಲಿ ನಡೆಯೋ ಕೃತ್ಯದ ಬಗ್ಗೆ ಭಾರತದ ಜ್ಯೋತಿಷಿ ಹೇಗೆ ಭವಿಷ್ಯ ನುಡಿಯಲು ಸಾಧ್ಯ ಅಂತಾ ಪ್ರಶ್ನಿಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...