alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯ ರಸ್ತೆಯಲ್ಲಿ ಪಾಕಿಸ್ತಾನದ ಹುಡುಗಿ ಬಟ್ಟೆ ಬಿಚ್ಚಿದ್ದೇಕೆ?

pakistan-girl

ಪಾಕಿಸ್ತಾನದ ಹುಡುಗಿಯೊಬ್ಬಳು ನಡು ರಸ್ತೆಯಲ್ಲಿ ಟಾಪ್ ಲೆಸ್ ಆಗಿ ಗಲಾಟೆ ಮಾಡಿದ್ದಾಳೆ. ಆಕೆ ಡ್ರಾಮಾಕ್ಕೆ ಕಾರಣ ಕೇಳಿದ್ರೆ ಆಶ್ಚರ್ಯವಾಗೋದು ಗ್ಯಾರಂಟಿ.

ಇಸ್ಲಾಮಾಬಾದ್ ನ ಎಟಿಎಂ ಬಳಿ ಕಾರೊಂದು ಬಂದು ನಿಂತಿದೆ. ಕಾರಿನಿಂದ ಇಳಿದ ವ್ಯಕ್ತಿಯೊಬ್ಬ ಎಟಿಎಂಗೆ ಹೋಗಿ ಹಣ ಡ್ರಾ ಮಾಡಿದ್ದಾನೆ. ಆತನ ಹಿಂದೆಯೇ ಹುಡುಗಿಯೊಬ್ಬಳು ಎಟಿಎಂಗೆ ನುಗ್ಗಿದ್ದಾಳೆ. ಆತನ ಬಳಿ ಹಣ ನೀಡುವಂತೆ ಕೇಳಿದ್ದಾಳೆ. ಅದಕ್ಕೆ ಆತ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಹುಡುಗಿ ಮೇಲುಡುಗೆ ಕಳಚಿ ಎಟಿಎಂನಿಂದ ಹೊರಗೆ ಬಂದಿದ್ದಾಳೆ.

ಆತ ಅತ್ಯಾಚಾರವೆಸಗಿದ್ದಾನೆಂದು ಆರೋಪ ಮಾಡಿದ್ದಾಳೆ. ಕಾರಿಗೆ ಕಲ್ಲೆಸೆಯಲು ಮುಂದಾಗಿದ್ದಾಳೆ. ಪಕ್ಕದಲ್ಲಿರುವ ಮಹಿಳೆಯೊಬ್ಬಳು ದುಪ್ಪಟ್ಟಾ ನೀಡಿದ್ರೂ ಅದನ್ನು ಹಾಕಿಕೊಳ್ಳದೆ ನಾಟಕವಾಡಿದ್ದಾಳೆ.

ಪಾಕಿಸ್ತಾನದ ಎಕ್ಸ್ ಪ್ರೆಸ್ ನ್ಯೂಸ್ ಚಾನೆಲ್ ಈ ಬಗ್ಗೆ ಆಶ್ಚರ್ಯ ಹುಟ್ಟಿಸುವಂತ ಸತ್ಯವನ್ನು ಹೊರಹಾಕಿದೆ. ನಡು ರಸ್ತೆಯಲ್ಲಿ ಬಟ್ಟೆ ಬಿಚ್ಚಿದ ಹುಡುಗಿ ಹುಡುಗಿಯಲ್ಲವಂತೆ. ಆಕೆ ಮಂಗಳಮುಖಿಯಂತೆ. ಮರ್ಸಿಡಿಸ್ ಬೆಂಜ್ ಕಾರ್ ಕಳ್ಳತನ ಮಾಡಲು ಆಕೆ ಪ್ಲಾನ್ ರೂಪಿಸಿದ್ದಾಳೆ.

ಕಾರ್ ಮಾಲೀಕನ ಮೇಲೆ ಸುಳ್ಳು ಆರೋಪ ಹೊರಿಸಿ ನಾಟಕವಾಡಿದ್ದಾಳೆ. ಆತನ ಗಮನ ಬೇರೆಡೆ ಇರುವಾಗ ಅದೇ ಗ್ಯಾಂಗ್ ನ ಇನ್ನೊಬ್ಬ ಬಂದು ಕಾರನ್ನು ಪಕ್ಕದಲ್ಲಿ ಹಾಕುವುದಾಗಿ ಹೇಳಿ ಕೀ ಪಡೆದಿದ್ದಾನೆ. ನಂತ್ರ ಕಾರು ಹತ್ತಿ ಪರಾರಿಯಾಗಿದ್ದಾನೆ. ಇದೇ ವೇಳೆ ನಾಟಕವಾಡ್ತಿದ್ದ ಹುಡುಗಿ ಕೂಡ ಏನೂ ಆಗೇ ಇಲ್ಲ ಎನ್ನುವ ಹಾಗೆ ಟ್ಯಾಕ್ಸಿ ಹತ್ತಿ ಹೋಗಿದ್ದಾಳೆ. ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಶಂಕಿತರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...