alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್‍ ನಲ್ಲಿ ಭಾರತೀಯ ಸಿನಿಮಾ ಬ್ಯಾನ್…?

ಭಾರತದ ಸಿನಿಮಾಗಳನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಲು ಬಿಡಬಾರದು, ಅವುಗಳಿಗೆ ಇಲ್ಲಿ ನಿಷೇಧ ಹೇರಬೇಕು ಎಂದು ಪಾಕಿಸ್ತಾನದ ಸಿನಿಮಾ ನಿರ್ಮಾಪಕರ ಸಂಘ (ಪಿಇಎಫ್‍ಎ) ಒತ್ತಾಯಿಸಿದೆ.

ಭಾರತದ ಸಿನಿಮಾಗಳ ಪ್ರದರ್ಶನದಿಂದ ನಮ್ಮಲ್ಲಿನ ವಿತರಕರು ಹಾಗೂ ಪ್ರದರ್ಶಕರಿಗೆ ಹಣ ಬರುತ್ತದೆ ನಿಜ. ಆದರೆ ಪಾಕಿಸ್ತಾನದ ಚಿತ್ರಗಳಿಗೆ ಭಾರತದಲ್ಲಿ ಪ್ರದರ್ಶನಕ್ಕೆ ಅನುಮತಿ ನೀಡದಿರುವಾಗ ಭಾರತದ ಸಿನಿಮಾಗಳಿಗೆ ಪಾಕಿಸ್ತಾನದಲ್ಲಿ ಅವಕಾಶ ಕೊಡುವುದರಲ್ಲಿ ಅರ್ಥವಿಲ್ಲ. ಒಂದು ವೇಳೆ ಭಾರತದ ಸಿನಿಮಾಗಳಿಗೆ ಇಲ್ಲಿ ನಿಷೇಧ ಹೇರದಿದ್ದರೆ ಮುಂದೆ ಅದು ಪಾಕಿಸ್ತಾನದ ಚಿತ್ರರಂಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಂಘದ ಪದಾಧಿಕಾರಿಗಳಲ್ಲೊಬ್ಬರಾದ ಚೌಧರಿ ಇಜಾಜ್ ಕಮ್ರಾನ್ ಹೇಳಿದ್ದಾರೆ.

ಭಾರತದ ಸಿನಿಮಾಗಳನ್ನು ಪಾಕಿಸ್ತಾನದಲ್ಲಿ ನಿಷೇಧಿಸುವಂತೆ ಕೋರಿ ಈ ಸಂಘವು ಲಾಹೋರ್ ಹೈಕೋರ್ಟ್‍ಗೂ ಅರ್ಜಿ ಸಲ್ಲಿಸಿದೆ. ಆದರೆ ಪಾಕಿಸ್ತಾನಿ ಸಿನಿಮಾ ನಿರ್ಮಾಪಕರ ಸಂಘದ ಒತ್ತಾಯಕ್ಕೆ ಅಕ್ಷೇಪ ವ್ಯಕ್ತಪಡಿಸಿರುವ ಅಲ್ಲಿನ ಪ್ರಮುಖ ವಿತರಕ-ಪ್ರದರ್ಶಕರೊಬ್ಬರು, ಭಾರತದ ಸಿನಿಮಾಗಳಿಗೆ ನಿಷೇಧ ಹೇರಿದರೆ ಮುಂದೆ ಅದು ಪಾಕಿಸ್ತಾನ ಚಿತ್ರರಂಗಕ್ಕೆ ಹಿನ್ನಡೆಯಾಗಲಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...