alex Certify
ಕನ್ನಡ ದುನಿಯಾ       Mobile App
       

Kannada Duniya

ಮತದಾನ ಮಾಡಿ, ಉಚಿತವಾಗಿ ಆಹಾರ ಸೇವಿಸಿ

ಪಾಕಿಸ್ತಾನದಲ್ಲಿ ಬುಧವಾರ ಸಾರ್ವಜನಿಕ ಚುನಾವಣೆಗೆ ಮತದಾನ ನಡೆಯುತ್ತಿದೆ. ಅನೇಕ ರಾಜಕೀಯ ನಾಯಕರು ಬೆಳಿಗ್ಗೆಯೇ ಮತದಾನ ಮಾಡಿದ್ದಾರೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾರರನ್ನು ಮತಗಟ್ಟೆಗೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಪಾಕಿಸ್ತಾನದ ಸಾರ್ವಜನಿಕ ಚುನಾವಣೆ ಪಾಕಿಸ್ತಾನದ ಪರಿಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ನಂಬಿರುವ ಜನರಿಗೆ ಬಾಂಬ್ ಸ್ಫೋಟ ಶಾಕ್ ನೀಡಿದೆ.

ಸ್ಫೋಟದ ಮಧ್ಯೆಯೂ ಮತದಾರರನ್ನು ಮತ ಕೇಂದ್ರದತ್ತ ಕರೆತರಲು ಕೆಲ ರೆಸ್ಟೋರೆಂಟ್ ಗಳು ಮುಂದಾಗಿವೆ. ಪಾಕಿಸ್ತಾನದ 20 ರೆಸ್ಟೋರೆಂಟ್ ಗಳು ಮತದಾರರಿಗೆ ಉಚಿತ ಆಹಾರ-ಊಟ ನೀಡುವ ಘೋಷಣೆ ಮಾಡಿದೆ. ಮತದಾನ ಮಾಡಿಬಂದ ನಾಗರೀಕರು ಕೈ ಬೆರಳಿಗೆ ಹಾಕಿರುವ ಶಾಯಿ ತೋರಿಸಿ ಉಚಿತವಾಗಿ ಆಹಾರ ಸೇವನೆ ಮಾಡಬಹುದೆಂದು ರೆಸ್ಟೋರೆಂಟ್ ಹೇಳಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ರೆಸ್ಟೋರೆಂಟ್ ಮಾಲೀಕರು ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎಲ್ಲರೂ ಮತದಾನ ಮಾಡಿ ಎಂದು ವಿನಂತಿ ಮಾಡಿಕೊಂಡಿರುವ ರೆಸ್ಟೋರೆಂಟ್ ಉಚಿತ ಆಹಾರ ನೀಡುವ ಘೋಷಣೆ ಮಾಡಿದೆ. ಇನ್ನು ಕೆಲ ರೆಸ್ಟೋರೆಂಟ್ ಗಳು ಆಫರ್ ನೀಡ್ತಿವೆ. ಐಸ್ ಕ್ರೀಂ, ಪಾನೀಯ, ಬೇಕರಿ ತಿಂಡಿಗಳನ್ನು ರಿಯಾಯಿತಿ ದರದಲ್ಲಿ ನೀಡ್ತಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...