alex Certify
ಕನ್ನಡ ದುನಿಯಾ       Mobile App
       

Kannada Duniya

ಗಡಿಯಲ್ಲಿ ಎತ್ತರದ ಧ್ವಜ ಹಾರಿಸ್ತಿದೆ ಪಾಕ್

pakistan-flag-620x400

ಸ್ವಾತಂತ್ರ್ಯ ದಿನ ಆಚರಿಸುತ್ತಿರುವ ಪಾಕಿಸ್ತಾನ ಭಾರತಕ್ಕಿಂತ ಒಂದ್ಹೆಜ್ಜೆ ಮುಂದೆ ಹೋಗಿದೆ. ಜಿಡಿಪಿ ದರ ಅಥವಾ ಸಾಕ್ಷರತೆ ಪ್ರಮಾಣದಲ್ಲೇನೂ ಅಲ್ಲ, ಬದಲಾಗಿ ಧ್ವಜದ ಎತ್ತರದಲ್ಲಿ. ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಧ್ವಜಾರೋಹಣ ಮಾಡುತ್ತಿರುವುದಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಕಮರ್ ಬಜ್ವಾ ಹೇಳಿಕೊಂಡಿದ್ದಾರೆ.

ಪಾಕಿಸ್ತಾನ ವಾಘಾ ಗಡಿಯಲ್ಲಿ 400 ಅಡಿ ಎತ್ತರದ ಕಂಭದ ಮೇಲೆ 120×80 ಅಡಿ ಧ್ವಜವನ್ನು ಹಾರಿಸಿದೆ. ಕಳೆದ ಮಾರ್ಚ್ ನಲ್ಲಿ ಭಾರತ ಅತ್ತಾರಿಯಲ್ಲಿ ಹಾರಿಸಿದ್ದ ಧ್ವಜಕ್ಕಿಂತಲೂ ಇದು ಎತ್ತರವಾಗಿದೆ. ಪಾಕಿಸ್ತಾನದ ಧ್ವಜ ವಿಶ್ವದ ಅತಿ ಎತ್ತರದ ಧ್ವಜಗಳಲ್ಲಿ 7ನೆಯದು ಅಂತಾ ಹೇಳಲಾಗ್ತಿದೆ.

ಲಾಹೋರ್ ನಲ್ಲಿ ನಿಂತು ವಾಘಾ ಗಡಿಯಲ್ಲಿ ಹಾರಿಸಿರುವ ಧ್ವಜವನ್ನು ನೋಡಬಹುದಂತೆ. ಭಾರತಕ್ಕಿಂತ್ಲೂ ಎತ್ತರದ ಧ್ವಜ ಹಾರಿಸಬೇಕು ಎಂಬ ಹಮ್ಮಿನಿಂದ ಪಾಕಿಸ್ತಾನ ಈ ಕ್ರಮಕ್ಕೆ ಮುಂದಾಗಿದೆ ಅಂತಾ ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...