alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆಯಿಂದ ಮಹಿಳೆ ರಕ್ಷಿಸಿದ ಪಾಕಿಸ್ತಾನಿ

mahile-pak

ನವದೆಹಲಿ: ವೇಶ್ಯಾವಾಟಿಕೆ ಕೂಪದಲ್ಲಿ ಸಿಲುಕಿದ್ದ ಭಾರತೀಯ ಮಹಿಳೆಯನ್ನು ಪಾಕಿಸ್ತಾನಿಯೊಬ್ಬ ಪಾರು ಮಾಡಿದ್ದಾನೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲೇ ಮಹಿಳೆ ಭಾರತಕ್ಕೆ ಮರಳಿದ್ದಾಳೆ.

ಗುಜರಾತ್ ಮೂಲದ ಮಹಿಳೆಗೆ ಮೇ ತಿಂಗಳಲ್ಲಿ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಆಕೆಯ ಗಂಡನ ಸಂಬಂಧಿ ಕರೆದುಕೊಂಡು ಹೋಗಿದ್ದಾನೆ.

ಆಕೆಯನ್ನು ಮಲೇಷಿಯಾದ ಕ್ವಾಲಲಾಂಪುರ್ ಗೆ ಕರೆದುಕೊಂಡು ಹೋಗಿ ಬೇರೆ ವ್ಯಕ್ತಿಗೆ ಮಾರಿದ್ದಾನೆ. ಈಕೆಯನ್ನು ಖರೀದಿಸಿದ ವ್ಯಕ್ತಿ ಮತ್ತು ಆತನ ಸ್ನೇಹಿತ ಅತ್ಯಾಚಾರ ಎಸಗಿದ್ದಾರೆ.

ಅಲ್ಲಿಂದ ಆಕೆ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಲ್ಪಟ್ಟಿದ್ದಾಳೆ. ಒಮ್ಮೆ ಈಕೆಯನ್ನು ಭೇಟಿ ಮಾಡಿದ್ದ ಪಾಕಿಸ್ತಾನಿಯೊಬ್ಬನಿಗೆ ತನ್ನ ಕತೆ ಹೇಳಿಕೊಂಡಿದ್ದಾಳೆ. ಈಕೆಯ ವಿಚಾರವನ್ನು ಕ್ವಾಲಲಾಂಪುರ್ ಪೊಲೀಸರಿಗೆ ತಿಳಿಸುವ ಪಾಕಿಸ್ತಾನಿ, ಮಹಿಳೆ ದೇಶಕ್ಕೆ ಮರಳಲು ಸಹಾಯ ಮಾಡಿದ್ದಾನೆ.

ಪೊಲೀಸರು ಮಹಿಳೆಯ ಗಂಡನ ಸಂಬಂಧಿ ಮತ್ತು ಆತನ ಸಹೋದರಿಯನ್ನು ಬಂಧಿಸಿದ್ದಾರೆ. ಪಾಕಿಸ್ತಾನದ ವ್ಯಕ್ತಿಯ ನೆರವಿನಿಂದ ಮಹಿಳೆ ಭಾರತಕ್ಕೆ ಮರಳಿದ್ದಾಳೆ. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ತನ್ನ 2 ವರ್ಷದ ಮಗನನ್ನು ತಬ್ಬಿಕೊಂಡು ಬಿಕ್ಕಳಿಸಿದ್ದಾಳೆ.

ತಾನು ಭಾರತಕ್ಕೆ ಮರಳುತ್ತೇನೆ ಎಂಬ ಯಾವ ಆಸೆಯೂ ಆಕೆಯಲ್ಲಿ ಉಳಿದಿರಲಿಲ್ಲ. ಆಕೆಯನ್ನು ವೇಶ್ಯಾವಾಟಿಕೆ ಜಾಲದಿಂದ ಪಾರು ಮಾಡಿದ ಪಾಕಿಸ್ತಾನಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ.

ಗಂಡನ ಸಂಬಂಧಿ ಗುಜರಾತ್ ನಲ್ಲಿದ್ದಾಗಲೇ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದ. ಬೆದರಿದ ಮಹಿಳೆ ಆತನೊಂದಿಗೆ ವಿದೇಶಕ್ಕೆ ಹೋಗಿದ್ದಳು. ಅಲ್ಲಿ ನರಕಯಾತನೆ ಅನುಭವಿಸಿ ಕೊನೆಗೂ ಭಾರತಕ್ಕೆ ಮರಳಿದ್ದು, ಮನೆ ಸೇರಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...