alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಗುಡುಗಿದ ಬೆನ್ನಲ್ಲೇ ಹಫೀಜ್ ಸಂಘಟನೆ ವಿರುದ್ದ ಕ್ರಮಕ್ಕೆ ಮುಂದಾದ ಪಾಕ್

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಉಗ್ರ ಸಂಘಟನೆ ಜಮಾತ್ ಉದ್ ದವಾ ಮತ್ತು ಫಲಾಹ್ ಇ ಇನ್ಸಾನಿಯತ್ ಫೌಂಡೇಶನ್ ಗೆ ಪಾಕಿಸ್ತಾನ ಲಗಾಮು ಹಾಕಿದೆ. ದೇಣಿಗೆ ಸಂಗ್ರಹಿಸದಂತೆ ನಿರ್ಬಂಧಿಸಿದೆ.

ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ ಬೆನ್ನಲ್ಲೇ ಈ ಕ್ರಮ ಕೈಗೊಂಡಿದೆ. ದೇಣಿಗೆ ಸಂಗ್ರಹಿಸದಂತೆ ಜೆಯುಡಿ, ಲಷ್ಕರ್ ಇ ತೊಯ್ಬಾ ಸೇರಿದಂತೆ ಹಲವು ಸಂಘಟನೆಗಳಿಗೆ ಪಾಕಿಸ್ತಾನದ ಭದ್ರತೆ ಮತ್ತು ವಿನಿಮಯ ಆಯೋಗ ನೋಟಿಸ್ ನೀಡಿದೆ.

ಕಳೆದ 15 ವರ್ಷಗಳಲ್ಲಿ ಅಮೆರಿಕ ಪಾಕಿಸ್ತಾನಕ್ಕೆ 33 ಬಿಲಿಯನ್ ಡಾಲರ್ ಗೂ ಅಧಿಕ ನೆರವು ನೀಡುವ ಮೂಲಕ ಮೂರ್ಖತನದ ಕೆಲಸ ಮಾಡಿದೆ ಅಂತಾ ಟ್ರಂಪ್ ಕಿಡಿಕಾರಿದ್ದರು. ಇದಕ್ಕೆ ಬದಲಾಗಿ ಪಾಕ್ ನಮಗೆ ನೀಡಿದ್ದು ಸುಳ್ಳು ಮತ್ತು ವಂಚನೆ, ನಮ್ಮ ನಾಯಕರನ್ನು ಅವರು ಮೂರ್ಖರೆಂದುಕೊಂಡಿದ್ದಾರೆ ಅಂತಾ ಹೇಳಿದ್ದರು. ಉಗ್ರರ ಸ್ವರ್ಗವಾಗಿರೋ ಪಾಕಿಸ್ತಾನಕ್ಕೆ ಇನ್ನು ಸಹಾಯ ಮಾಡುವುದಿಲ್ಲವೆಂದು ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...