alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿಗೂ ಇಲ್ಲ ವಿಮಾನದ ಫಸ್ಟ್ ಕ್ಲಾಸ್‌ ಟಿಕೆಟ್‌…!

ಇಸ್ಲಾಮಾಬಾದ್‌: ಅಧಿಕಾರಕ್ಕೆ ಬಂದ 4 ದಿನಗಳಲ್ಲಿ ಪಾಕಿಸ್ಥಾನದ ಖಜಾನೆ ಗಟ್ಟಿಗೊಳಿಸಲು ನೂತನ ಪ್ರಧಾನಿ ಇಮ್ರಾನ್‌ ಖಾನ್‌ ಹಲವಾರು ಕ್ರಮ ಜಾರಿಗೊಳಿಸಲು ಮುಂದಾಗಿದ್ದಾರೆ.

ಪ್ರಮುಖವಾಗಿ ಪ್ರಧಾನಿ, ಅಧ್ಯಕ್ಷರನ್ನೂ ಸೇರಿಕೊಂಡಂತೆ ವಿಮಾನದಲ್ಲಿ ಮೊದಲ ದರ್ಜೆಯ ಟಿಕೆಟ್‌ನಲ್ಲಿ ಪ್ರಯಾಣಿಸುವುದಕ್ಕೆ ಲಗಾಮು ಹಾಕಿದ್ದಾರೆ. ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಬಳಸದಂತೆ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.

ಪ್ರಧಾನಿ, ಅಧ್ಯಕ್ಷರು, ಮುಖ್ಯ ನ್ಯಾಯಮೂರ್ತಿ, ಸೆನೆಟ್‌ ಮುಖ್ಯಸ್ಥರು, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್‌, ರಾಜ್ಯದ ಸಿಎಂಗಳು ಕ್ಲಬ್‌ ಅಥವಾ ಬಿಸಿನೆಸ್‌ ಕ್ಲಾಸ್‌ ಪ್ರಯಾಣ ಮಾಡಬೇಕು. ಸೇನಾ ಮುಖ್ಯಸ್ಥರು ಮೊದಲಿನಿಂದಲೂ ಬಿಸಿನೆಸ್‌ ಕ್ಲಾಸ್‌ನಲ್ಲೇ ಪ್ರಯಾಣಿಸುವ ನಿಯಮ ಮುಂದುವರೆಯಲಿದೆ. ದೇಶದ ಒಳಗೆ ಹಾಗೂ ವಿದೇಶಕ್ಕೆ ತೆರಳಲು ವಿಶೇಷ ವಿಮಾನದ ಬಳಕೆಗೆ ನಿಷೇಧ ಹೇರಲಾಗಿದೆ ಎಂದು ಮಾಹಿತಿ ಸಚಿವ ಚೌಧರಿ, ಸಂಪುಟದ ತೀರ್ಮಾನಗಳನ್ನು ಸುದ್ದಿಗಾರರಿಗೆ ಹೇಳಿದ್ದಾರೆ.

ಪಂಜಾಬ್ ಹಾಗೂ ಖೈಬರ್ ಪುಂಖ್ತಾತ್ವ ಪ್ರದೇಶದಲ್ಲಿ ಹಿಂದಿನ ಸರಕಾರ ಕೈಗೊಂಡಿದ್ದ ಮೆಗಾ ಸಾರಿಗೆ ಯೋಜನೆಯ ಬಗ್ಗೆ ಆಡಿಟ್ ಮಾಡಲು ಸಹ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...