alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದಲ್ಲಿ ಮಹಿಳಾ ಸಂಸದೆ ಮೇಲೆ ಮೊಟ್ಟೆ ಎಸೆತ

ಪಾಕಿಸ್ತಾನದಲ್ಲಿ ನಾಯಕರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ನವಾಜ್ ಶರೀಫ್, ಇಮ್ರಾನ್ ಖಾನ್, ಅಹ್ಸಾನ್ ಇಕ್ಬಾಲ್ ನಂತ್ರ ಈಗ ಮಹಿಳಾ ನಾಯಕಿ ಮೇಲೆ ಮೊಟ್ಟೆ ಹಾಗೂ ಟೋಮೋಟೋ ಎಸೆಯಲಾಗಿದೆ. ಇಮ್ರಾನ್ ಖಾನ್ ಪಕ್ಷದ ಮಹಿಳಾ ಕಾರ್ಯಕರ್ತೆಯಾಗಿದ್ದ ಸಂಸದೆ ಆಯೇಶಾ ಗುಲಾಲಾಯಿ ಮೇಲೆ ಮೊಟ್ಟೆ ಎಸೆಯಲಾಗಿದೆ.

ಬಹವಾಲ್ಪುರ್ ನ  ಹೋಟೆಲ್ ಬಳಿ ಆಯೇಶಾ ಮೇಲೆ ದಾಳಿ ನಡೆಸಲಾಗಿದೆ. ತೆಹ್ರೀಕ್-ಇ-ಇನ್ಸಾಫ್ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಆಯೇಶಾ ಸಾಮಾಜಿಕ ಕಾರ್ಯಕರ್ತೆ ಕೂಡ ಹೌದು. ಮಹಿಳಾ ಮೀಸಲಾತಿ ಸ್ಥಾನದಿಂದ ಚುನಾಯಿತರಾಗಿದ್ದ ಗುಲಾಲಾಯಿ ಇಮ್ರಾನ್ ಖಾನ್ ವಿರುದ್ಧವೇ ದೂರಿದ್ದರು. ಇಮ್ರಾನ್ ಖಾನ್ ವಿರುದ್ಧ ಭ್ರಷ್ಟಾಚಾರ ಹಾಗೂ ಕೆಟ್ಟ ಮೆಸ್ಸೇಜ್ ಕಳುಹಿಸುತ್ತಾರೆಂದು ದೂರಿದ್ದರು.

2012ರಲ್ಲಿ ತೆಹ್ರೀಕ್ –ಇ-ಇನ್ಸಾಫ್ ಪಕ್ಷ ಸೇರಿದ್ದ ಗುಲಾಲಾಯಿ 2017ರಲ್ಲಿ ಪಕ್ಷ ಬಿಟ್ಟಿದ್ದರು. FATA  ರಾಷ್ಟ್ರೀಯ ಅಸೆಂಬ್ಲಿಯ ಮೊದಲ ಸ್ತ್ರೀ ಸದಸ್ಯೆಯಾಗಿರುವ ಅವರು ಪಕ್ಷ ಬಿಟ್ಟರೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...