alex Certify
ಕನ್ನಡ ದುನಿಯಾ       Mobile App
       

Kannada Duniya

ಫೆಬ್ರವರಿ 14 ರಂದು ಸಹೋದರಿಯರ ದಿನಾಚರಣೆಗೆ ಮುಂದಾದ ಪಾಕ್ ವಿವಿ

ಲಾಹೋರ್: ಫೆಬ್ರವರಿ 14 ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಿದರೆ, ಪಾಕಿಸ್ತಾನ ತನ್ನ ಸಂಪ್ರದಾಯಕ್ಕೆ ಒತ್ತು ಕೊಟ್ಟು ಇದನ್ನು ಸಹೋದರಿಯರ ದಿನವನ್ನಾಗಿ ಆಚರಿಸಲು ಮುಂದಾಗಿದೆ.

ಅಂದರೆ ಪಾಕ್ ನ ವಿಶ್ವವಿದ್ಯಾಲಯ ಈ ನಿರ್ಧಾರಕ್ಕೆ ಬಂದಿದ್ದು, ಇಸ್ಲಾಮಿಕ್ ಸಂಪ್ರದಾಯವನ್ನು ಮತ್ತಷ್ಟು ಪ್ರಚುರಪಡಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ವಿಶ್ವವಿದ್ಯಾಲಯದ ಉಪ ಕುಲಪತಿ ಹೇಳಿಕೊಂಡಿದ್ದಾರೆ.

ಆ ದಿನ ಮಹಿಳಾ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಹಾಗೂ ಕೆಲವು ಬಟ್ಟೆಗಳನ್ನು ಉಡುಗೊರೆಯಾಗಿ ಕೊಡಬಹುದು ಎಂದು ಫೈಸಲಾಬಾದ್ ಕೃಷಿ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಜಾಫರ್ ಇಕ್ಬಾಲ್ ಹೇಳಿದ್ದಾರೆ.

ತಾವು ಹೀಗೆ ಮಾಡುತ್ತಿರುವುದಕ್ಕೆ ಸ್ಪಷ್ಟೀಕರಣವನ್ನು ಕೊಟ್ಟಿರುವ ಜಾಫರ್, ಪಾಶ್ಚಿಮಾತ್ಯ ಪದ್ಧತಿಯು ಪಾಕಿಸ್ತಾನದ ಮತ್ತು ಇಸ್ಲಾಮ್ ಧರ್ಮದ ಸಂಸ್ಕೃತಿಯ ಜೊತೆ ಪೈಪೋಟಿ ನಡೆಸುತ್ತಿರುವ ಕಾರಣ ಈ ನಿರ್ಧಾರ ತಳೆಯಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ತಾವು ಕೊಟ್ಟಿರುವ ಈ ಐಡಿಯಾ ಯಶಸ್ಸು ಕಾಣುತ್ತದೋ ಇಲ್ಲವೋ ಎಂಬ ಬಗ್ಗೆ ತಮಗೆ ಸಂಶಯ ಇದೆ ಎಂದೂ ಸಹ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...