alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರೂಕ್ ಗಾಗಿ ಚಪ್ಪಲಿ ತಯಾರಿಸಿದವನೀಗ ಜೈಲು ಪಾಲು

Pak Shoemaker Designs Special Peshawari Sandals For Shahrukh Khan, Jailedಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಗಾಗಿ ತಯಾರಾಗಿದ್ದ ಚಪ್ಪಲಿ ಅದನ್ನು ತಯಾರಿಸಿದವನು ಜೈಲು ಪಾಲಾಗುವಂತೆ ಮಾಡಿದೆ. ಚಪ್ಪಲಿ ತಯಾರಕನ ಮೇಲಿನ ಆರೋಪ ದೃಢಪಟ್ಟಲ್ಲಿ ಆತ ಕೆಲ ವರ್ಷ ಜೈಲಿನಲ್ಲೇ ಕಾಲ ಕಳೆಯಬೇಕಾಗುತ್ತದಲ್ಲದೇ ದಂಡವನ್ನೂ ತೆರಬೇಕಾಗುತ್ತದೆ.

ಶಾರುಕ್ ಅವರ ಸಂಬಂಧಿ ಎಂದು ಹೇಳಲಾದ ವ್ಯಕ್ತಿಯೊಬ್ಬ, ಪಾಕಿಸ್ತಾನದ ಪೇಶಾವರ ನಿವಾಸಿ ಜಹಾಂಗೀರ್ ಖಾನ್ ಎಂಬವನ ಬಳಿ ಜಿಂಕೆ ಚರ್ಮದ ಚಪ್ಪಲಿ ತಯಾರಿಸಲು ಆರ್ಡರ್ ನೀಡಿದ್ದ. ಇದನ್ನು ನಟ ಶಾರೂಕ್ ಖಾನ್ ಗೆ ಕಳುಹಿಸಿಕೊಡುವುದಾಗಿ ಆತ ಹೇಳಿದ್ದು, ಮೊದಲೇ ಶಾರೂಕ್ ಅಭಿಮಾನಿಯಾಗಿದ್ದ ಜಹಾಂಗೀರ್ ಖಾನ್ ಈ ವಿಚಾರ ಕೇಳಿ ಥ್ರಿಲ್ ಆಗಿದ್ದ.

ಸುಮ್ಮನಿರಲಾರದ ಆತ, ಈ ವಿಚಾರವನ್ನು ಎಲ್ಲರ ಬಳಿಯೂ ಹೇಳಿಕೊಂಡು ತಿರುಗಿದ್ದು, ಕಾಡ್ಗಿಚ್ಚಿನಂತೆ ಹಬ್ಬಿತ್ತು. ಈ ವಿಷಯ ಅರಣ್ಯಾಧಿಕಾರಿಗಳ ಕಿವಿಗೂ ಮುಟ್ಟಿದ್ದು ಅವರು ಪೊಲೀಸರಿಗೆ ದೂರು ನೀಡಿದ ಬಳಿಕ ಜಹಾಂಗೀರ್ ಖಾನ್ ನನ್ನು ಈಗ ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ವಿಭಾಗದ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಜಿಂಕೆ ಚರ್ಮದಿಂದ ಈ ಚಪ್ಪಲಿ ತಯಾರಾಗಿರುವುದು ದೃಢಪಟ್ಟಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಜಹಾಂಗೀರ್ ಖಾನ್, ಕೆಲ ವರ್ಷಗಳ ಕಾಲ ಜೈಲು ಪಾಲಾಗಲಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...