alex Certify
ಕನ್ನಡ ದುನಿಯಾ       Mobile App
       

Kannada Duniya

100 ವರ್ಷಗಳ ಹಿಂದಿನ ಪ್ರಕರಣಕ್ಕೆ ಈಗ ತೀರ್ಪು ನೀಡಿದೆ ಪಾಕ್ ನ್ಯಾಯಾಲಯ

ಭಾರತದಲ್ಲಿ 100 ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಪಾಕಿಸ್ತಾನದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ಆಸ್ತಿ ವಿವಾದ 1918ರಲ್ಲಿ ರಾಜಸ್ತಾನದಲ್ಲಿ ಶುರುವಾಗಿತ್ತು. ಭಾರತ-ಪಾಕ್ ಇಬ್ಭಾಗಕ್ಕೂ ಮೊದಲಿನ ಕೇಸ್ ಇದು.

ರಾಜಸ್ತಾನದ ಬಹವಲ್ಪುರ್ ಎಂಬಲ್ಲಿ ಇದ್ದ 700 ಎಕರೆ ಭೂಮಿ ವಿವಾದದ ಕೇಂದ್ರ ಬಿಂದುವಾಗಿತ್ತು. ನಂತರ ಈ ಪ್ರಕರಣವನ್ನು ಬಹವಲ್ಪುರ ಕೋರ್ಟ್ ಗೆ ವರ್ಗಾಯಿಸಲಾಗಿತ್ತು. ಸದ್ಯ ಬಹವಲ್ಪುರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ಸೇರಿದೆ.

2005ರಲ್ಲಿ ಈ ಕೇಸ್ ಪಾಕ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಂದಿನಿಂದ್ಲೂ ಪ್ರಕರಣದ ವಿಚಾರಣೆಗಾಗಿ ದೂರುದಾರರು ಮತ್ತು ಪ್ರತಿವಾದಿಗಳ ಕುಟುಂಬದವರು ಬಹವಲ್ಪುರದಿಂದ ಇಸ್ಲಾಮಾಬಾದ್ ಗೆ ಅಲೆಯುತ್ತಲೇ ಇದ್ದಾರೆ. ಭೂಮಿಯ ಮಾಲೀಕ ಎನ್ನಲಾದ ಶೇರ್ ಖಾನ್ 1918ರಲ್ಲೇ ಮೃತಪಟ್ಟಿದ್ದಾನಂತೆ.

ಹಾಗಾಗಿ ಇಸ್ಲಾಮಿಕ್ ಕಾನೂನಿನ ಪ್ರಕಾರ ಆಸ್ತಿಯನ್ನು ಎಲ್ಲಾ ಉತ್ತರಾಧಿಕಾರಿಗಳು ಹಂಚಿಕೊಳ್ಳಬೇಕೆಂದು ಕೋರ್ಟ್ ತೀರ್ಪು ನೀಡಿದೆ. ಆಸ್ತಿ ಕೇವಲ ಒಬ್ಬ ವ್ಯಕ್ತಿಗೆ ಸೇರಿದ್ದಲ್ಲ ಅಂತಾ ಅಭಿಪ್ರಾಯಪಟ್ಟಿದೆ. ಪಾಕಿಸ್ತಾನದಲ್ಲಿ ಇಂತಹ ಸಾವಿರಾರು ಪ್ರಕರಣಗಳು ಬಾಕಿ ಇವೆ ಅಂತಾ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...