alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಪ್ರಧಾನಿ ಪತ್ನಿಯ ಮಾಜಿ ಪತಿ ಕ್ಷಮೆ ಯಾಚಿಸದ್ದಕ್ಕೆ ಕೆಲಸ ಕಳೆದುಕೊಂಡ ಪೊಲೀಸ್ ಅಧಿಕಾರಿ

ಲಾಹೋರ್: ಪಾಕ್ ಪ್ರಧಾನಿಯ ಹಾಲಿ ಪತ್ನಿಯ ಮಾಜಿ ಗಂಡನಲ್ಲಿ ಕ್ಷಮೆ ಯಾಚಿಸದ ಜಿಲ್ಲಾ ಪೊಲೀಸ್ ಅಧಿಕಾರಿಯನ್ನೇ ಡಿಸ್ ಮಿಸ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಮೂರನೆ ಹಾಗೂ ಹಾಲಿ ಪತ್ನಿ ಬುಶ್ರಾ ಬಿಬಿ ಅವರ ಮಾಜಿ ಪತಿ ಖಾವರ್ ಮನೀಕಾರ ಕಾರನ್ನು ರಿಜ್ವಾನ್ ಓಮರ್ ಎಂಬ ಪೊಲೀಸ್ ಅಧಿಕಾರಿಯೊಬ್ಬರು ಲಾಹೋರ್ ನಿಂದ ಪಾಕ್ ಪಟ್ಟನ್ ಗೆ ತೆರಳುತ್ತಿರುವಾಗ ತಡೆದಿದ್ದರು.

ಕಾರನ್ನು ಹಿಂಬಾಲಿಸಿ ತಪಾಸಣೆ ಮಾಡಿದ ಹಿನ್ನಲೆಯಲ್ಲಿ ಕ್ಷಮೆ ಯಾಚಿಸುವಂತೆ ಖಾವರ್ ಮನಿಕಾ ಒತ್ತಾಯಿಸಿದ್ದರು. ಇದಕ್ಕೆ ಪೊಲೀಸ್ ಅಧಿಕಾರಿ ರಿಜ್ವಾನ್ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿದ್ದು, ರಿಜ್ವಾನ್ ಒಮರ್ ರನ್ನು ವಜಾಗೊಳಿಸಿದೆ.

ಜಿಲ್ಲಾ ಪೊಲೀಸ್ ಅಧಿಕಾರಿ ರಿಜ್ವಾನ್ ಒಮರ್ ನ್ನು ವಜಾ ಮಾಡಿರುವ ಕ್ರಮಕ್ಕೆ ಪಾಕ್ ವಿಪಕ್ಷ ಪಿಎಂಎಲ್-ಎನ್ ಇಮ್ರಾನ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...