alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಮಾಣವಚನಕ್ಕೂ ಮುನ್ನವೇ ಇಮ್ರಾನ್ ಖಾನ್ ಗೆ ‘ಶಾಕ್’ ಕೊಟ್ಟ ಚುನಾವಣಾ ಆಯೋಗ

ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಪ್ರಧಾನಿ ಗಾದಿಯ ಸಮೀಪ ಇರುವ ಇಮ್ರಾನ್ ಖಾನ್, ಚುನಾವಣೆಯ ವೇಳೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳುವಂತೆ ಪಾಕಿಸ್ತಾನ ಚುನಾವಣಾ ಆಯೋಗ ತಿಳಿಸಿದೆ.

ಮೊಹಮ್ಮದ್ ಖಾನ್ ಮುಂದಾಳತ್ವದ ನಾಲ್ಕು ಅಧಿಕಾರಿಗಳ ನಿಯೋಗ, ಪ್ರಕರಣದ ವಿಚಾರಣೆ ನಡೆಸಿತು. ಎನ್.ಎ. 53 ಇಸ್ಲಾಮಾಬಾದ್ ಕ್ಷೇತ್ರದಲ್ಲಿ ಎದ್ದು ಕಾಣುವ ರೀತಿ ಬ್ಯಾಲೇಟ್ ಪೇಪರ್ ಮೇಲೆ ಇಮ್ರಾನ್ ಖಾನ್ ಫೋಟೋ ಕಂಡು ಬಂದಿತ್ತು. ಈ ಬಗ್ಗೆ ಚುನಾವಣಾ ಆಯೋಗ ವಿಚಾರಣೆ ನಡೆಸಿತು.

ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಈ ಪ್ರಕರಣವನ್ನು ಕೊನೆಗೊಳಿಸುವಂತೆ ಇಮ್ರಾನ್ ಖಾನ್ ಪರ ವಕೀಲ ಅವಾನ್, ಅಧಿಕಾರಿಗಳ ಎದುರು ಮನವಿ ಮಾಡಿಕೊಂಡಿದ್ದರು. ಆದ್ರೆ, ಇಮ್ರಾನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ, ಲಿಖಿತ ಕ್ಷಮೆ ಯಾಚಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...