alex Certify
ಕನ್ನಡ ದುನಿಯಾ       Mobile App
       

Kannada Duniya

ನಗು ತರಿಸುವಂತಿದೆ ಪಾಕ್ ವಾಹಿನಿಯ ವರದಿ

pak_channel_09_01_2017

ಬಾಲಿವುಡ್ ಹಿರಿಯ ನಟ ಓಂಪುರಿ ಸಾವಿನ ಸುತ್ತ ಅನುಮಾನಗಳ ಹುತ್ತವೆದ್ದಿದೆ. ಮೊದಲು ಓಂಪುರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎನ್ನಲಾಗ್ತಾ ಇತ್ತು. ಆದ್ರೆ ಮರಣೋತ್ತರ ಪರೀಕ್ಷೆ ವರದಿ ಬೇರೆ ಕಾರಣಗಳನ್ನು ಹೇಳ್ತಾ ಇದೆ. ಈ ನಡುವೆ ಪಾಕಿಸ್ತಾನದ ಚಾನೆಲ್ ಗಳು ನೀಡಿರುವ ವರದಿ ನಗು ಬರಿಸುವಂತಿದೆ.

ಓಂಪುರಿ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬೇಹುಗಾರಿಕೆ ಅಧಿಕಾರಿ ಅಜಿತ್ ಡೋವಲ್ ಕಾರಣ ಎಂದು ಪಾಕಿಸ್ತಾನ ಚಾನೆಲ್ ಹೇಳ್ತಾ ಇದೆ. ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಪಾಕಿಸ್ತಾನದ ಚಾನೆಲ್ಲೊಂದು ಓಂಪುರಿ ನಿಧನಕ್ಕೆ ಮೋದಿ ಹಾಗೂ ಡೋವಲ್ ಕಾರಣ ಎಂದಿದೆ.

ಉರಿ ದಾಳಿ ನಂತ್ರ ಓಂಪುರಿ ಪಾಕಿಸ್ತಾನಿ ನಟರ ಪರವಾಗಿ ಮಾತನಾಡಿದ್ದರು. ಇದೇ ಅವರ ಸಾವಿಗೆ ಕಾರಣವಾಯ್ತು ಎಂದು ಚಾನೆಲ್ ಹೇಳ್ತಾ ಇದೆ. ಇದಲ್ಲದೆ ಇನ್ನೂ ಅನೇಕ ಮಸಾಲೆಗಳನ್ನು ಸೇರಿಸಲಾಗಿದೆ. ಓಂಪುರಿಯನ್ನು ಡೋವೆಲ್ ಮನೆಗೆ ಕರೆದು ಹೊಡೆದಿದ್ದಾರೆ. ಬಟ್ಟೆ ಬಿಚ್ಚಿ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಹುತಾತ್ಮರಾದ ನಿತಿನ್ ಯಾದವ್ ಮನೆಗೆ ಹೋಗಿ ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ್ದಾರೆಂದು ಹೇಳಿದೆ.

ಇಷ್ಟೇ ಅಲ್ಲ ಓಂಪುರಿಗೆ ಮೊದಲು ಮದ್ಯ ಕುಡಿಸಲಾಗಿದೆ. ನಂತ್ರ ದಿಂಬಿನಿಂದ ಕೊಲೆಗೈಯ್ಯಲಾಗಿದೆ. ಓಂಪುರಿ ಮನೆಗೆ ಬಂದ ಕೊಲೆಗಾರ ಡೋವಲ್ ಪ್ರತಿನಿಧಿಯಾಗಿದ್ದು, ಇವೆಲ್ಲದ ಹಿಂದೆ ಮೋದಿ ಕೈ ಇದೆ ಎಂದು ಚಾನೆಲ್ ದೂರಿದೆ. ಪಾಕ್ ಪರ ನಿಂತವರ ವಿರುದ್ಧ ಮೋದಿ ಸಮರ ಸಾರಿದ್ದು, ಮೋದಿ ಮುಂದಿನ ಗುರಿ ಸಲ್ಮಾನ್ ಖಾನ್ ಹಾಗೂ ಫಾವದ್ ಖಾನ್ ಎಂದು ಚಾನೆಲ್ ವರದಿ ಮಾಡಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...