alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಪತ್ರಕರ್ತನ ವಿಡಿಯೋ ಫುಲ್ ವೈರಲ್ ! ಕಾರಣವೇನು ಗೊತ್ತಾ?

ಟಿವಿ ಚಾನೆಲ್ ಗಳಲ್ಲಿ ಬರುವ ಆ್ಯಂಕರ್ ಗಳು, ವರದಿಗಾರರು ಮಾಡುವ ಹಲವು ಎಡವಟ್ಟುಗಳು ಆಗಿಂದಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವುದು ಸರ್ವೇ ಸಾಮಾನ್ಯ. ಈ ಟ್ರೋಲ್‌ ಗೆ ಇದೀಗ ಪಾಕಿಸ್ತಾನದ ಸಮಾ ಟಿವಿ ನಿರೂಪಕ ಸೇರ್ಪಡೆಯಾಗಿದ್ದಾನೆ.

ಪಾಕಿಸ್ತಾನ ಮೂಲದ ಸಮಾ ಚಾನೆಲ್‌ನ ನಿರೂಪಕ, ಮಧ್ಯೆ ಬೆರಳನ್ನು ತೋರಿಸಿರುವ ವಿಡಿಯೋವನ್ನು ಆ ದೇಶದ ಪತ್ರಕರ್ತ ಸೈಯದ್ ರಾಝಾ ಮೆಹ್ದಿ ಟ್ವೀಟ್ ಮಾಡಿದ್ದು, ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

ಪ್ಯಾನಲ್ ನಡೆಯುತ್ತಿದ್ದ ವೇಳೆ ಬ್ರೇಕ್ ತಗೆದುಕೊಂಡಿರುವ ಪ್ಯಾನಲ್ ಪ್ರೊಡ್ಯೂಸರ್, ಬಳಿಕ ಏಕಾಏಕಿ ನಿರೂಪಕರನ್ನು ತೋರಿಸಿದ್ದೇ ಈ ಎಡವಟ್ಟಿಗೆ ಕಾರಣವಾಗಿದೆ.

ಬ್ರೇಕ್ ನಿಂದ ವಾಪಸಾಗಿದ್ದು, ನಿರೂಪಕನಿಗೆ ತಿಳಿದಿಲ್ಲವಾದ್ದರಿಂದ ಕ್ಯಾಮೆರಾ ಹಿಂದಿರುವ ವ್ಯಕ್ತಿಗೆ ಮಧ್ಯದ ಬೆರಳನ್ನು ತೋರಿಸುತ್ತಾ ನಗಾಡುತ್ತಿದ್ದಾನೆ. ಜತೆಯಲ್ಲಿದ್ದ ನಿರೂಪಕಿಗೆ ಲೈವ್ ಹೋಗುತ್ತಿರುವುದು ಗೊತ್ತಾದರೂ ನಗುವನ್ನು ತಡೆಯಲು ಸಾಧ್ಯವಾಗದೇ, ನಗೆಗಡಲಲ್ಲಿ ತೇಲಾಡಿರುವ ದೃಶ್ಯ ಇದಾಗಿತ್ತು.

ಸದ್ಯ ನಿರೂಪಕಿಗಿಂತ ನಿರೂಪಕ ಟ್ವೀಟರ್, ಫೇಸ್ ಬುಕ್ ನಲ್ಲಿ ಜನಪ್ರಿಯವಾಗಿದ್ದು, ಅನೇಕರು ಈ ವಿಡಿಯೋವನ್ನು ತಮ್ಮ ವಾಲ್ ನಲ್ಲಿ ಹಾಕಿಕೊಂಡು, ಪತ್ರಕರ್ತರ ಕಷ್ಟದ ಬಗ್ಗೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...