alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಧವ್ ತೀರ್ಪಿನ ಬಗ್ಗೆ ಪಾಕ್ ಮಾಧ್ಯಮದಲ್ಲಿ ಬಿಸಿಬಿಸಿ ಚರ್ಚೆ

pakistan-media-3

ಭಾರತದ ಪ್ರಜೆ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ಸೇನಾ ಕೋರ್ಟ್ ಮರಣದಂಡನೆ ವಿಧಿಸಿದೆ. ಪಾಕ್ ಸೇನಾ ನ್ಯಾಯಾಲಯದ ತೀರ್ಪಿಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಾ ಇದೆ. ಪಾಕ್ ಗೆ ಬುದ್ದಿ ಕಲಿಸುವಂತೆ ಭಾರತೀಯರು ಒತ್ತಾಯ ಮಾಡ್ತಿದ್ದಾರೆ. ಜಾಧವ್ ಗೆ ರಕ್ಷಣೆ ನೀಡಲು ಭಾರತ ಯಾವ ಮಟ್ಟಕ್ಕೆ ಬೇಕಾದ್ರೂ ಹೋಗಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಕೇವಲ ಭಾರತದಲ್ಲೊಂದೇ ಅಲ್ಲ ಪಾಕಿಸ್ತಾನದಲ್ಲಿ ಕೂಡ ಜಾಧವ್ ಮರಣದಂಡನೆ ವಿಚಾರ ಚರ್ಚೆಯಾಗ್ತಾ ಇದೆ. ಪಾಕಿಸ್ತಾನದ ಸೇನೆ ಬಗ್ಗೆ ಅಲ್ಲಿನವರು ಮಾತನಾಡುವಂತಿಲ್ಲ. ಆದ್ರೆ ಪಾಕ್ ದೊಡ್ಡ ದೊಡ್ಡ ಪತ್ರಿಕೆ ಹಾಗೂ ಮಾಧ್ಯಮಗಳು ಈ ತೀರ್ಪಿನ ಬಗ್ಗೆ ಚರ್ಚೆ ನಡೆಸ್ತಿವೆ.

ಪಾಕ್ ಒಂದು ವೇಳೆ ಜಾಧವ್ ಗೆ ಮರಣದಂಡನೆ ವಿಧಿಸಿದ್ರೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. ಭಾರತದ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಡಲಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ವಿರೋಧ ಎದುರಿಸಬೇಕಾಗುತ್ತದೆ ಎಂದು ಮಾಧ್ಯಮಗಳು ಹೇಳಿವೆ. ಹಾಗೆ ಜಾಧವ್ ವಿರುದ್ಧ ಸಂಗ್ರಹವಾಗಿರುವ ಸಾಕ್ಷಿಯನ್ನು ಸಾರ್ವಜನಿಕರ ಮುಂದೆ ಇಡುವಂತೆ ಮನವಿ ಮಾಡಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...