alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಹುಡುಗಿಯರ ಕನಸಿನಲ್ಲಿ ಭಾರತದ ಹುಡುಗ

nikhaಪಾಕಿಸ್ತಾನಿ ಹುಡುಗಿಯರ ಕನಸಿನ ರಾಜಕುಮಾರ ಯಾವಾಗ್ಲೂ ಭಾರತೀಯ ಯುವಕನಾಗಿರುತ್ತಾನಂತೆ. ಅನೇಕ ಸಮೀಕ್ಷೆ ಹಾಗೂ ವರದಿಗಳಿಂದ ಇದು ಬಹಿರಂಗವಾಗಿದೆ. ಪಾಕಿಸ್ತಾನಿ ಹುಡುಗಿಯರು ಭಾರತೀಯ ಹುಡುಗನನ್ನು ಬಯಸಲು ಅನೇಕ ಕಾರಣಗಳಿವೆ.

ಪಾಕ್ ಹುಡುಗಿಯರು ಭಾರತೀಯ ಹುಡುಗನನ್ನು ಆಯ್ಕೆ ಮಾಡಿಕೊಳ್ಳಲು ಮೊದಲ ಕಾರಣ ಅತ್ತೆ. ಪಾಕಿಸ್ತಾನಕ್ಕೆ ಹೋಲಿಸಿದ್ರೆ ಭಾರತೀಯ ಅತ್ತೆಯರು ವಾಸಿ. ಇಲ್ಲಿನ ಅನೇಕ ಅತ್ತೆಯರು ಸೊಸೆಯನ್ನು ಮಗಳಂತೆ ನೋಡಿಕೊಳ್ತಾರೆ. ಆದ್ರೆ ಪಾಕಿಸ್ತಾನದಲ್ಲಿ ಸೊಸೆಯಾದವಳು ಪ್ರತಿದಿನ ಅತ್ತೆ ಕಾಲನ್ನು ಒತ್ತಬೇಕು. ಅತ್ತೆಯಾದವಳು ಸೊಸೆಗೆ ಕಿರಿಕಿರಿ, ಹಿಂಸೆ ನೀಡುವುದು ತನ್ನ ಹಕ್ಕು ಎಂದುಕೊಂಡಿದ್ದಾಳೆ.

ಎರಡನೇ ಕಾರಣ ಪ್ರೀತಿ. ಪಾಕ್ ಹುಡುಗಿಯರು ಭಾರತದ ಸಿನಿಮಾಗಳನ್ನು ನೋಡಿ ಅಲ್ಲಿಯ ಹಾಗೆ ಪ್ರೀತಿ ಮಾಡುವ ಪತಿ ತನಗೆ ಬೇಕು ಎಂದುಕೊಳ್ತಾರೆ. ಪಾಕಿಸ್ತಾನದಲ್ಲಿ ಪತ್ನಿಯಾದವಳು ಯಾವುದೇ ಕಷ್ಟವನ್ನು ಗಂಡನಿಗೆ ಹೇಳುವಂತಿಲ್ಲ. ಏನೇ ಕಷ್ಟವಿದ್ರೂ ಗಂಡನಿಗೆ ಸುಖ ನೀಡಲೇಬೇಕು.

ಮೂರನೇ ಕಾರಣ ವರದಕ್ಷಿಣೆ. ಭಾರತದಲ್ಲಿ ವರದಕ್ಷಿಣೆ ಪಿಡುಗು ಇನ್ನೂ ಕಡಿಮೆಯಾಗಿಲ್ಲ. ಆದ್ರೆ ಭಾರತಕ್ಕೆ ಹೋಲಿಸಿದ್ರೆ ಪಾಕಿಸ್ತಾನದಲ್ಲಿ ವರದಕ್ಷಿಣೆ ಜಾಸ್ತಿ ಇದೆ. ಮದುವೆಯಾದ ಎಷ್ಟೋ ವರ್ಷಗಳ ನಂತ್ರ ವರದಕ್ಷಿಣೆ ನೆಪ ಹೇಳಿ ತಲಾಕ್ ನೀಡುವ ಪತಿಯರೂ ಪಾಕ್ ನಲ್ಲಿದ್ದಾರೆ.

ನಾಲ್ಕನೇ ಕಾರಣ ಕುಟುಂಬ ಯೋಜನೆ. ಮದುವೆಯಾದ ನಂತ್ರ ಪಾಕಿಸ್ತಾನದಲ್ಲಿ ಮಹಿಳೆಯರನ್ನು ಮಕ್ಕಳನ್ನು ಹೆರುವ ಯಂತ್ರದಂತೆ ನೋಡಿಕೊಳ್ತಾರೆ. 25 ವರ್ಷದ ಹೆಣ್ಣು ಮಗಳಿಗೆ 5 ಮಕ್ಕಳಿರುವ ಉದಾಹರಣೆಯೂ ಇದೆ.

ಇನ್ನೊಂದು ಕಾರಣ ಭಾರತೀಯ ಹುಡುಗಿಯರಿಗೆ ಸಿಗುವ ಶಿಕ್ಷಣ.  ಭಾರತೀಯ ಹುಡುಗಿಯರು ಪುರುಷರ ಸಮಾನವಾಗಿ ಎಲ್ಲ ಕ್ಷೇತ್ರದಲ್ಲೂ ಕೆಲಸ ಮಾಡ್ತಿದ್ದಾರೆ. ಅಮೆರಿಕಾ, ಆಸ್ಟ್ರೇಲಿಯಾ ಹಿಗೆ ಬೇರೆ ದೇಶಗಳಿಗೆ ಹೋಗಿ ದುಡಿಯುತ್ತಿದ್ದಾರೆ. ಪಾಕಿಸ್ತಾನದಲ್ಲಿ ಪರಿಸ್ಥಿತಿ ಹಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...