alex Certify
ಕನ್ನಡ ದುನಿಯಾ       Mobile App
       

Kannada Duniya

ಹಫೀಜ್ ಸಯೀದ್ ಬಂಧನ ಅವಧಿ ವಿಸ್ತರಣೆ

hafiz-saeed-650_650x400_61485870237

ಭಾರತದ ದೊಡ್ಡ ಶತ್ರು ಹಾಗೂ ಮುಂಬೈ ದಾಳಿ ರೂವಾರಿ ಜಮಾತ್-ಉದ್-ದವಾ ಭಯೋತ್ಪಾದಕ ಹಫೀಜ್ ಸಯೀದ್ ಬಂಧನ ಅವಧಿ ವಿಸ್ತರಣೆಯಾಗಿದೆ. ಇನ್ನೂ 90 ದಿನಗಳ ಕಾಲ ಪಾಪಿ ಹಫೀಜ್ ಸಯೀದ್ ಜೈಲಿನಲ್ಲಿ ಕಾಲ ಕಳೆಯಲಿದ್ದಾನೆ.

ಭಾನುವಾರ ರಾತ್ರಿ ಸಯೀದ್ ನ ಮೂರು ತಿಂಗಳ ಸೆರೆಮನೆ ವಾಸ ಮುಕ್ತಾಯವಾಗಿದ್ದು,ಇನ್ನೂ 90 ದಿನ ಜೈಲಿನಲ್ಲಿರಲಿದ್ದಾನೆಂದು ಪಾಕಿಸ್ತಾನದ ಮೂಲಗಳು ತಿಳಿಸಿವೆ. ಗೃಹಖಾತೆ ಸಚಿವ ಚೌಧರಿ ನಿಸಾರ್ ಈ ಬಗ್ಗೆ ಸಭೆ ನಡೆಸಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಭಯೋತ್ಪಾದನಾ ನಿಗ್ರಹ ಕಾನೂನಿನಡಿ ಸಯೀದ್ ಬಂಧನ ಅವಧಿ ವಿಸ್ತಣೆ ಮಾಡಲಾಗಿದೆ ಎಂದು ಪಂಜಾಬ್ ಸರ್ಕಾರದ ಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿ 30ರಂದು ಲಾಹೋರ್ ನಲ್ಲಿ ಹಫೀಜ್ ಸಯೀದ್ ಸೇರಿದಂತೆ ಐದು ಮಂದಿ ಭಯೋತ್ಪಾದನಾ ನಾಯಕರನ್ನು ಪೊಲೀಸರು ಬಂಧಿಸಿದ್ದರು. ಪ್ರೊ. ಮಲಿಕ್ ಜಾಫರ್ ಇಕ್ಬಾಲ್, ಅಬ್ದುರ್ ರೆಹಮಾನ್ ಅಬಿದ್, ಖಜೀ ಕಾಶಿಫ್ ಹುಸೇನ್ ಮತ್ತು ಅಬ್ದುಲ್ಲಾ ಉಬಿದ್ ಬಂಧನ ಅವಧಿಯನ್ನೂ 90 ದಿನಗಳವರೆಗೆ ವಿಸ್ತರಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...