alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಟ್ಟ ಕೆಲ್ಸ ಮಾಡುವಾಗ್ಲೇ ಸಿಕ್ಕಿ ಬಿದ್ಲು ಏರ್ ಹೋಸ್ಟೆಸ್

pak-airlines-air-hostess-arrested-in-canada-for-shopliftingಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ಲೈನ್ಸ್ ನ ಏರ್ ಹೋಸ್ಟೆಸ್ ಒಬ್ಬಳು ಕೆಟ್ಟ ಕೆಲಸ ಮಾಡುವಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾಳೆ. ಆಕೆಯ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಶಕ್ಕೆ ಪಡೆದಿರುವ ಕೆನಡಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಲಾಹೋರ್ ನಿಂದ ಟೊರಾಂಟೋಗೆ ಆಗಮಿಸಿದ್ದ ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ಲೈನ್ಸ್ PK797 ವಿಮಾನದ ಏರ್ ಹೋಸ್ಟೆಸ್, ಟೊರಾಂಟೋದ ಡಿಪಾರ್ಟ್ಮೆಂಟಲ್ ಸ್ಟೋರ್ ಒಂದರಲ್ಲಿ ವಸ್ತುಗಳನ್ನು ಕಳ್ಳತನ ಮಾಡಿದ್ದು, ಆಕೆಯ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸಿಸಿ ಟಿವಿ ಫೂಟೇಜ್ ಸಮೇತ ಪೊಲೀಸರಿಗೆ ದೂರು ನೀಡಲಾಗಿದ್ದು, ಆಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಳ್ಳತನ ಕೃತ್ಯ ಸಾಬೀತಾದಲ್ಲಿ ಆಕೆ ಶಿಕ್ಷೆ ಅನುಭವಿಸಲಿದ್ದಾಳೆ. ಘಟನೆ ಕುರಿತು ಸ್ಪಷ್ಟನೆ ನೀಡಿರುವ ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ಲೈನ್ಸ್, ವಿಮಾನದಿಂದ ಇಳಿದ ಬಳಿಕ ಸಿಬ್ಬಂದಿ ಮಾಡಿರುವ ಕೃತ್ಯಕ್ಕೆ ಹೊಣೆಗಾರರಲ್ಲ ಎಂದಿದೆ. ಅಲ್ಲದೇ ಆಕೆ ತಪ್ಪಿತಸ್ಥಳೆಂದು ಸಾಬೀತಾದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...