alex Certify
ಕನ್ನಡ ದುನಿಯಾ       Mobile App
       

Kannada Duniya

ಲಿಂಗ ತಾರತಮ್ಯ ತಡೆಗೆ ಮುಂದಾದ ಆಕ್ಸ್ ಫರ್ಡ್ ವಿವಿ

oxford

ಅಮೆರಿಕಾದ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಲಿಂಗತಾರತಮ್ಯಕ್ಕೆ ಅಂತ್ಯ ಹಾಡಲು ಮುಂದಾಗಿದೆ. ವಿಶ್ವವಿದ್ಯಾನಿಲಯ ಹುಡುಗರಿಗೆ `’HE’’ ಹಾಗೂ ಹುಡುಗಿಯರಿಗೆ ‘SHE’ ಎಂದು ಸಂಬೋಧಿಸದಂತೆ ಸೂಚಿಸಿದೆ. ಇದರ ಬದಲಾಗಿ ‘ZE’ ಎಂದು ಕರೆಯುವಂತೆ ಆದೇಶ ನೀಡಿದೆ.

ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳಿಗೆ ಹೊಸ ಮಾರ್ಗಸೂಚಿಯನ್ನು ಜಾರಿಗೆ ತಂದಿದೆ. ‘ZE’ ಎಂದು ಸಾಮಾನ್ಯವಾಗಿ ನಪುಂಸಕರಿಗೆ ಕರೆಯಲಾಗುತ್ತದೆ. ವಿಶ್ವವಿದ್ಯಾನಿಲಯದಲ್ಲಿ ‘ZE’ ಎಂಬ ಪದ ಬಳಕೆಯಿಂದ ನಪುಂಸಕರಿಗೆ ಮುಜುಗರವಾಗುವುದಿಲ್ಲ. ಹಾಗೆ ಲಿಂಗ ತಾರತಮ್ಯ ಕೂಡ ಕಡಿಮೆಯಾಗಲಿದೆ ಎನ್ನುವುದು ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ ಅಭಿಪ್ರಾಯ.

ವಿಶ್ವವಿದ್ಯಾನಿಲಯದ ನಿರ್ಧಾರ ವಿದ್ಯಾರ್ಥಿಗಳ ಖುಷಿಗೆ ಕಾರಣವಾಗಿದೆ. ವಿಶ್ವವಿದ್ಯಾನಿಲಯ ಮಾರ್ಗಸೂಚಿಯನ್ನು ಈಗಾಗಲೇ ಜಾರಿಗೆ ತಂದಿದೆ. ಇಂಥ ಪ್ರಯತ್ನಕ್ಕೆ ಮುಂದಾದ ಮೊದಲ ವಿವಿ ಇದಾಗಿದೆ. ಕೇಂಬ್ರಿಡ್ಜ್ ವಿವಿ ಕೂಡ ಈ ಯೋಜನೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಿದೆ. ಇದಕ್ಕೂ ಮುನ್ನ ಬ್ರಿಟನ್ ನ ಕೆಲ ಶಾಲೆಗಳಲ್ಲಿ ಈ ನಿಯಮ ಜಾರಿಗೆ ತರಲಾಗಿದೆ. ಶಾಲಾ ಸಮವಸ್ತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...