alex Certify
ಕನ್ನಡ ದುನಿಯಾ       Mobile App
       

Kannada Duniya

ವೇತನ ಏರಿಕೆ ಮಾಡಿದ್ದನ್ನ ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ ವೈದ್ಯರು

ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಪ್ರತಿಭಟನೆಗಳು ನಡೆಯೋದು ಸಾಮಾನ್ಯ. ಆದ್ರೆ ಕೆನಡಾದ 500ಕ್ಕೂ ಹೆಚ್ಚು ವೈದ್ಯರು ಮಾತ್ರ ಇದಕ್ಕೆ ತದ್ವಿರುದ್ಧ. ಸಂಬಳ ಹೆಚ್ಚಳ ಮಾಡಿರೋದನ್ನೇ ವಿರೋಧಿಸಿ ಪ್ರತಿಭಟನೆಗಿಳಿದಿದ್ದಾರೆ. ಸುಮಾರು 150 ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಇವರಿಗೆ ಸಾಥ್ ನೀಡಿದ್ದಾರೆ.

ಇತ್ತೀಚೆಗಷ್ಟೆ ವೈದ್ಯರ ಸಂಬಳವನ್ನು ಏರಿಕೆ ಮಾಡಲಾಗಿದೆ. ಆದ್ರೆ ತಮಗೆ ಅಷ್ಟೊಂದು ವೇತನ ಬೇಡ ಅನ್ನೋದು ಡಾಕ್ಟರ್ ಗಳ ವಾದ. ಸಂಬಳ ಏರಿಕೆ ಮಾಡುವ ಬದಲು ನರ್ಸ್ ಗಳಿಗೆ ಹೆಚ್ಚಿನ ಅವಕಾಶ ಕೊಡಿ, ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ದೊರಕುವಂತೆ ಮಾಡಿ ಅನ್ನೋದು ವೈದ್ಯರ ಒತ್ತಾಯ.

ನರ್ಸ್ ಹಾಗೂ ಆಸ್ಪತ್ರೆಯ ಇತರ ಸಿಬ್ಬಂದಿಗೆ ಸರಿಯಾದ ಸೌಲಭ್ಯವಿಲ್ಲ. ಹಾಗಾಗಿ ನಮ್ಮ ಸಂಬಳವನ್ನು ಕಡಿತ ಮಾಡಿ, ಅವರಿಗೆ ಅನುಕೂಲ ಮಾಡಿಕೊಡಿ ಅಂತಾ ಕೇಳ್ತಿದ್ದಾರೆ. ಕೆನಡಾ ಸರ್ಕಾರ ಫಿಸಿಶಿಯನ್ ಗೆ ವಾರ್ಷಿಕ ಸುಮಾರು 17 ಲಕ್ಷ ರೂಪಾಯಿ ವೇತನ ನೀಡುತ್ತಿದೆ.

ಶಸ್ತ್ರಚಿಕಿತ್ಸಾ ತಜ್ಞರಿಗೆ 23 ಲಕ್ಷ ರೂಪಾಯಿ ಸಂಬಳವಿದೆ. ದುಡ್ಡಿಗೆ ಆಸೆಪಡದೇ ನರ್ಸ್ ಗಳು ಮತ್ತು ರೋಗಿಗಳ ಹಿತಕ್ಕಾಗಿ ತಮ್ಮ ಸಂಬಳವನ್ನೇ ಕಡಿತ ಮಾಡಿ ಎನ್ನುತ್ತಿರುವ ವೈದ್ಯರ ಔದಾರ್ಯ ಎಲ್ಲರಿಗೂ ಮಾದರಿ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...