alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪಿದ ಭಾರೀ ವಿಮಾನ ದುರಂತ, ನೂರಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರು

ಮೆಕ್ಸಕೋದಲ್ಲಿ ಸಂಭವಿಸಲಿದ್ದ ಭಾರೀ ವಿಮಾನ ದುರಂತವೊಂದರಲ್ಲಿ 97 ಮಂದಿ ಪ್ರಯಾಣಿಕರು ಸೇರಿದಂತೆ ನಾಲ್ಕು ಮಂದಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೆಕ್ಸಿಕೋದ ಡುರಾಂಗೋ ವಿಮಾನ ನಿಲ್ದಾಣದಿಂದ ರಾಜಧಾನಿಯತ್ತ ಮುಖ ಮಾಡಿದ್ದ ವಿಮಾನ ಟೇಕಾಫ್ ಸಮಯದಲ್ಲಿ ಅಪಘಾತಕ್ಕೀಡಾಯ್ತು.

ಟೇಕಾಫ್ ಸಮಯದಲ್ಲಿ ಕಾಣಿಸಿಕೊಂಡ ಬಿರುಗಾಳಿಯಿಂದಾಗಿ ವಿಮಾನ ನಿಯಂತ್ರಣ ಕಳೆದುಕೊಂಡು ಭೂಮಿಗೆ ಅಪ್ಪಳಿಸಿತು. ಈ ವೇಳೆ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿತು. ಕೂಡಲೇ ಕಾರ್ಯ ಪ್ರವೃತ್ತರಾದ ವಿಮಾನ ನಿಲ್ದಾಣ ಸಿಬ್ಬಂದಿ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ವಿಮಾನದಿಂದ ಹೊರಗೆ ಕರೆತರುವಲ್ಲಿ ಸಫಲರಾಗಿದ್ದಾರೆ. ಕೂಡಲೇ ಬೆಂಕಿ ಆವರಿಸದಂತೆ ವಿಮಾನದಲ್ಲಿ ಕಾಣಿಸಿಕೊಂಡಿದ್ದ ಹೊಗೆಯನ್ನ ಸಿಬ್ಬಂದಿ ಆರಿಸಿದ್ದಾರೆ.

ಘಟನೆಯಲ್ಲಿ 80ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಗಾಯಾಳುಗಳಿಗೆ ರೆಡ್ ಕ್ರಾಸ್ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ವಿಮಾನ ಅಪಘಾತದ ಫೋಟೋಗಳು ಮೆಕ್ಸಿಕೋದ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಘಟನೆಯ ಬಗ್ಗೆ ಜನರು ಆತಂಕಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...