alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಟಿ ಮಾಡಿ ಬಿಲ್ ಕೊಡದೇ ಗ್ರಾಹಕರು ಪರಾರಿ

party

ಸ್ಪೇನ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡಿದ 100 ಕ್ಕೂ ಹೆಚ್ಚು ಗ್ರಾಹಕರು ಬಿಲ್ ಪಾವತಿಸದೆ ಪರಾರಿಯಾಗಿದ್ದಾರೆ. ಬೆಂಬಿಬ್ರೆಯಲ್ಲಿರೋ ಹೋಟೆಲ್ ಕಾರ್ಮನ್ ನಲ್ಲಿ ಈ ಘಟನೆ ನಡೆದಿದೆ.

ಸುಮಾರು 100 ಮಂದಿ ಜೊತೆಯಾಗಿ ರೆಸ್ಟೋರೆಂಟ್ ಗೆ ಬಂದಿದ್ದಾರೆ. ಕಂಠಪೂರ್ತಿ ಕುಡಿದು, ತಿಂದು ಮಜಾ ಉಡಾಯಿಸಿದ್ದಾರೆ. ನಂತರ ಎಲ್ಲರೂ ಸೇರಿ ಡಾನ್ಸ್ ಮಾಡಲು ಶುರುಮಾಡಿದ್ದಾರೆ. ಹಾಗೆ ಮಾಡುತ್ತಲೇ ಒಬ್ಬೊಬ್ಬರಾಗಿ ಹೋಟೆಲ್ ನಿಂದ ಎಸ್ಕೇಪ್ ಆಗಿಬಿಟ್ಟಿದ್ದಾರೆ.

ಇದ್ದಕ್ಕಿದ್ದಂತೆ ಗ್ರಾಹಕರೆಲ್ಲ ಮಾಯವಾಗಿದ್ದು ನೋಡಿ ಮಾಲೀಕ ಆ್ಯಂಟೊನಿಯೋ ರೋಡ್ರಿಗ್ಸ್ ಗೆ ಗಾಬರಿ. ಅವರಲ್ಲಿ ಯಾರೊಬ್ಬರೂ ಬಿಲ್ ಪಾವತಿಸಿರಲಿಲ್ಲ, ಅವರ ಪಾರ್ಟಿಯ ಬಿಲ್ ಸುಮಾರು 1.40 ಲಕ್ಷ ರೂಪಾಯಿಯಷ್ಟಾಗಿತ್ತು. ಗ್ರಾಹಕರು ತಮ್ಮನ್ನು ವಂಚಿಸಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಹೋಟೆಲ್ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ. ವಂಚನೆ ಮಾಡಿದ ಗ್ರಾಹಕರು ಸ್ಪೇನ್ ನಾಗರಿಕರಲ್ಲ ಎನ್ನಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...