alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಾಧಿ ಮೇಲೆ ಕಾಲಿಟ್ಟು ವಿವಾದ ಸೃಷ್ಟಿಸಿಕೊಂಡ ಹುಡುಗಿಯರು

ಮೆಕ್ಸಿಕೋದಲ್ಲಿ ನಡೆದ ಫೋಟೋಶೂಟೊಂದು ಚರ್ಚೆಗೆ ಕಾರಣವಾಗಿದೆ. ಮೂವರು ಹುಡುಗಿಯರು ಸ್ಮಶಾನದಲ್ಲಿ ವಿವಿಧ ಭಂಗಿಯಲ್ಲಿ ಫೋಟೋಕ್ಕೆ ಫೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಹುಡುಗಿಯೊಬ್ಬಳು ವಿರೋಧ ವ್ಯಕ್ತಪಡಿಸಿದ್ದಾಳೆ.

ಸ್ಮಶಾನದಲ್ಲಿ ಫೋಟೋಕ್ಕೆ ಫೋಸ್ ನೀಡಿದ ಹುಡುಗಿಯೊಬ್ಬಳು ಸಮಾಧಿ ಮೇಲೆ ಕಾಲಿಟ್ಟಿದ್ದಾಳೆ. ಈ ಸಮಾಧಿ, ವಿರೋಧ ವ್ಯಕ್ತಪಡಿಸಿದ ಹುಡುಗಿಯ ತಾತನದಂತೆ. ತಾತನ ಸಮಾಧಿಗೆ ಇವ್ರು ಅವಮಾನ ಮಾಡಿದ್ದಾರೆಂದು ಆ ಹುಡುಗಿ ವಿರೋಧ ವ್ಯಕ್ತಪಡಿಸಿದ್ದಾಳೆ. ಜೊತೆಗೆ ಸ್ಮಶಾನದ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾಳೆ.

ನನ್ನ ತಾತನ ಸಮಾಧಿ ಮೇಲೆ ಕಾಲಿಡಲು ಇವರು ಯಾರು? ಕುಟುಂಬಸ್ಥರನ್ನು ಗೌರವದಿಂದ ಕಾಣುವುದು ಹೇಗೆಂದು ನಾನು ಇವರಿಗೆ ಕಲಿಸುತ್ತೇನೆ ಎಂದು ಹುಡುಗಿ ಕಿಡಿಕಾರಿದ್ದಾಳೆ. ವಾಸ್ತವವಾಗಿ ಈ ಫೋಟೋಶೂಟ್ ಫೋಟೋವನ್ನು ಮೇಕ್ ಅಪ್ ಟೀಚರ್ ಅಸ್ಸೋ ಒರ್ಟೆಗಾ ಫೇಸ್ಬುಕ್ ಪೇಜ್ ನಲ್ಲಿ ಹಾಕಲಾಗಿದೆ. ಈ ಫೇಸ್ಬುಕ್ ಪೇಜನ್ನು 4 ಲಕ್ಷಕ್ಕೂ ಹೆಚ್ಚು ಮಂದಿ ಫಾಲೋ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...